ಕಾಸರಗೋಡು: ಹೊಸದುರ್ಗ ಬಿ.ಆರ್.ಸಿ.(ಬ್ಲಾಕ್ ಸಂಪನ್ಮೂಲ ಕೇಂದ್ರ) ಪ್ರತಿಭಾ ಕೇಂದ್ರಗಳು ಮಕ್ಕಳ ಪ್ರತಿಭೆಯನ್ನು ಪೆÇೀಷಿಸುವ ಮತ್ತು ಬೆಳೆಸುವ ಪ್ರತಿಭಾ ಪ್ರಯೋಗಾಲಯಗಳಾಗಿ ಮಾರ್ಪಟ್ಟಿದೆ. ಟ್ಯಾಲೆಂಟ್ ಲ್ಯಾಬ್‍ಗಳು ಮಕ್ಕಳಿಗೆ ಆನ್‍ಲೈನ್ ತರಗತಿಗಳನ್ನು ಒದಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಥಾಪಿಸಿರುವ ಪಂಚಾಯತಿ ಆಧಾರಿತ ಪ್ರತಿಭಾ ಕೇಂದ್ರಗಳಾಗಿ ಬದಲಾಗಿದೆ.
ಆನ್‍ಲೈನ್ ತರಗತಿಗಳಿಗಾಗಿ ಪ್ರತಿಭಾ ಕೇಂದ್ರಕ್ಕೆ ಬರುವ ಪ್ರತಿ ಮಗುವಿನಲ್ಲೂ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವುದು ಮತ್ತು ಬೆಳೆಸುವುದು ಈ ಯೋಜನೆಯ ಉದ್ದೇಶವಾಗಿದೆ. ಹೊಸದುರ್ಗ ಬಿ.ಆರ್.ಸಿ. ವ್ಯಾಪ್ತಿಯ ಆರು ಪ್ರತಿಭಾ ಕೇಂದ್ರಗಳಲ್ಲಿ ಸುಮಾರು 120 ವಿದ್ಯಾರ್ಥಿಗಳನ್ನು ಹೊಂದಿದೆ. ಚಿತ್ರಕಲೆ, ಸಂಗೀತ, ಕ್ರೀಡೆ ಮತ್ತು ಕೆಲಸದ ಅನುಭವದಲ್ಲಿ ಆಸಕ್ತಿ ಹೊಂದಿರುವ ಮಕ್ಕಳನ್ನು ಹುಡುಕುವುದು ಮತ್ತು ತರಬೇತಿ ನೀಡುವುದು ಇದರ ಲಕ್ಷ್ಯವಾಗಿದೆ. ಅತ್ಯುತ್ತಮ ತರಬೇತಿ ನೀಡಲು ಬಿ.ಆರ್.ಸಿಯಲ್ಲಿ 27 ತಜ್ಞ ಶಿಕ್ಷಕರು ಇದ್ದಾರೆ. ಅವರು ಪ್ರತಿ ಪ್ರತಿಭಾ ಕೇಂದ್ರಕ್ಕೆ ವಾರಕ್ಕೆ ಎರಡು ದಿನ ಭೇಟಿ ನೀಡುತ್ತಾರೆ ಮತ್ತು ಪ್ರತಿ ಪ್ರದೇಶಕ್ಕೂ ನಿರ್ದಿಷ್ಟ ತರಬೇತಿಯನ್ನು ನೀಡುತ್ತಾರೆ.
ಮಕ್ಕಳ ಅಭಿರುಚಿ ತಿಳಿಯುವ ಚಟುವಟಿಕೆಗಳು ಕಳೆದ ವಾರದಿಂದ ಪ್ರಾರಂಭವಾಗಿದ್ದವು. ಇದರ ಆಧಾರದ ಮೇಲೆ ತರಗತಿಗಳು ಆಸಕ್ತಿಗೆ ಅನುಗುಣವಾಗಿ ಲಭ್ಯವಿರುತ್ತವೆ. ಆನ್‍ಲೈನ್ ಅಧ್ಯಯನದ ಅಂತ್ಯದವರೆಗೆ ಪ್ರತಿಭಾ ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು. ಶಾಲೆಗಳು ಪುನರ್ ಆರಂಭಗೊಂಡಾಗ ಈ ಮಕ್ಕಳು ವ್ಯಾಸಂಗ ಮಾಡುವ ನಿರ್ದಿಷ್ಟ ಶಾಲೆಗಳನ್ನು ಕೇಂದ್ರೀಕರಿಸಿ ಹೆಚ್ಚಿನ ತರಬೇತಿ ನೀಡಲಾಗುವುದು. ಇಂತಹ ಚಟುವಟಿಕೆಗಳು ಮಕ್ಕಳು ಹೊಸ ವಿಷಯಗಳನ್ನು ಕಲಿಯಲು ಸಹಾಯ ಮಾಡುತ್ತದೆ ಮತ್ತು ಕೋವಿಡ್ ಸಮಯದ ನಿಬಂಧನೆಗಳ ಬಗ್ಗೆ, ಅವರ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೊಸದುರ್ಗ ಬಿ.ಆರ್.ಸಿ. ಕಾರ್ಯಕ್ರಮ ಅಧಿಕಾರಿ ಉಣ್ಣಿರಾಜನ್ ಹೇಳಿರುವರು.