ಕಾಸರಗೋಡು: ಕಾಞಂಗಾಡ್ ಜಿಲ್ಲಾಸ್ಪತ್ರೆಯ ಹೋಮಿಯೋಪತಿ ವಿಭಾಗದ ಆಯುಷ್ಮಾನ್ ಭವ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಐ.ಸಿ.ಡಿ.ಎಸ್. ಪರಪ್ಪ ಬ್ಲಾಕ್ ಜಂಟಿಯಾಗಿ ಆಯೋಜಿಸುವ ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹದಲ್ಲಿ ಜೀವನಶೈಲಿ ರೋಗ ಸಮಗ್ರ ಚಿಕಿತ್ಸಾ ಯೋಜನೆಯನ್ನು ಪ್ರಾರಂಭಿಸಲಾಯಿತು.
ಜಿಲ್ಲಾ ಹೋಮಿಯೋ ವೈದ್ಯಕೀಯ ಅಧಿಕಾರಿ ಡಾ.ಕೆ.ರಾಮ ಸುಬ್ರಮಣ್ಯಂ ಸಮಾರಂಭವನ್ನು ಉದ್ಘಾಟಿಸಿದರು. ಆಯುಷ್ಮಾನ್ ಭವ ಪ್ರಾಜೆಕ್ಟ್ ಕನ್ವೀನರ್ ಡಾ. ಮುಜೀಬ್ ರಹಮಾನ್ ಈ ಯೋಜನೆ ಬಗ್ಗೆ ವಿವರಿಸಿದರು. ಐಸಿಡಿಎಸ್ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್ ಮಾತನಾಡಿದರು. ಆಯುಷ್ಮಾನ್ ಭವ ಪ್ರಕೃತಿ ಚಿಕಿತ್ಸಾ ಅಧಿಕಾರಿ ಡಾ.ಅತಿರಾ ಮುಂಗಾತ್ ಅವರು 'ಉತ್ತಮ ಆಹಾರದಿಂದ ಆರೋಗ್ಯಕ್ಕೆ' ಕುರಿತು ತರಗತಿ ನಡೆಸಿದರು.
ವೈದ್ಯಕೀಯ ಅಧಿಕಾರಿ ಡಾ.ಸುನೀರಾ ಇ.ಕೆ ಸ್ವಾಗತಿಸಿ, ಐಸಿಡಿಎಸ್ ಪರಪ್ಪ ಹೆಚ್ಚುವರಿ ಮೇಲ್ವಿಚಾರಕ ಶರತ್ಮಾ ಕೆ.ಸುಕುಮಾರ್ ವಂದಿಸಿದರು. ಇಂದು(ಸೆಪ್ಟೆಂಬರ್ 2) ಅಂಗನವಾಡಿ ಶಿಕ್ಷಕಿಯರಿಗೆ ಆನ್ ಲೈನ್ ಯೋಗ ತರಬೇತಿ ಮತ್ತು ಸೆಪ್ಟೆಂಬರ್ 3 ರಂದು(ನಾಳೆ) ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ದೂರವಾಣಿ ಸಮಾಲೋಚನೆ (ವೈದ್ಯರನ್ನು ಕೇಳಿ. 9400061907, 9400061908) ಕಾರ್ಯಕ್ರಮ ಸಂಯೋಜಿಸಲಾಗಿದೆ ಎಂದು ಕನ್ವೀನರ್ ತಿಳಿಸಿದ್ದಾರೆ.