ಕಾಸರಗೋಡು: ಕಾಞಂಗಾಡ್ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರಿಗೆ ವಿದಾಯಕೂಟ ಸೋಮವಾರ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಮರಣಿಕೆ ಹಸ್ತಾಂತರಿಸಿದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸುವರು. ನೂತನವಾಗಿ ಪದಗ್ರಹಣ ನಡೆಸಿರುವ ಕಾಞಂಗಾಡ್ ಉಪ ಜಿಲ್ಲಾಧಿಕಾರಿ ಮೇಘಶ್ರೀ ಡಿ.ಆರ್., ಸಹಾಯಕ ಜಿಲ್ಲಾಧಿಕಾರಿಗಳಾದ ಸಜಿ ಎಫ್. ಮೆಂಡೀಸ್, ಕೆ.ರವಿಕುಮಾರ್, ಅಜೀಷ್ ಶಂಸುದ್ದೀನ್, ಹಣಕಾಸು ಅಧಿಕಾರಿ ಕೆ.ಸತೀಶನ್, ಜಿಲ್ಲಾ ಕಾನೂನು ಅಧಿಕಾರಿ ಕೆ.ಮುಹಮ್ಮದ್ ಕುಂಞÂ್ಞ, ಸರ್ವೇ ಡೆಪ್ಯೂಟಿ ಡೈರೆಕ್ಟರ್ ಕೆ.ಕೆ.ಸುನಿಲ್, ತಹಸೀಲ್ದಾರರು, ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ ಬಳಿಕ ಅರುಣ್ ಕೆ.ವಿಜಯನ್ ಅವರು ವರ್ಗಾವಣೆಗೊಂಡು ತೆರಳುತ್ತಿದ್ದಾರೆ. ಅವರು ಮೂಲತಃ ತ್ರಿಶೂರು ನಿವಾಸಿಯಾಗಿದ್ದಾರೆ. ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್ ಸ್ವಾಗತಿಸಿದರು. ಹುಸೂರ್ ಶಿರಸ್ತೇದಾರ್ ಕೆ.ಮುರಳೀಧರನ್ ವಂದಿಸಿದರು.