HEALTH TIPS

ವಿವಾದಗಳು ವ್ಯತ್ಯಾಸ ತರಬಾರದು:ಭಾರತ-ಚೀನಾ ವಿದೇಶಾಂಗ ಸಚಿವರ ಸಭೆಯಲ್ಲಿ ಸೇನಾಪಡೆ ಹಿಂತೆಗೆದುಕೊಳ್ಳಲು ಒಪ್ಪಿಗೆ

        ನವದೆಹಲಿ: ಗಡಿ ವಾಸ್ತವ ರೇಖೆಯ ಬಳಿ ಚೀನಾ ಸೇನಾಪಡೆ ಶಸ್ತ್ರಸಜ್ಜಿತವಾಗಿ ನಿಯೋಜನೆ ಬಗ್ಗೆ ಭಾರತದ ಕಳವಳವನ್ನು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ಸಭೆ ನಡೆಸಿದ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

        ಭಾರತ-ಚೀನಾ ವಿದೇಶಾಂಗ ಸಚಿವರ ಮಾತುಕತೆ ನಡೆಯುತ್ತಿದ್ದು, ಗಡಿ ವಾಸ್ತವ ರೇಖೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಚೀನಾದ ಕಡೆಯಿಂದ ನಿಖರ ಸ್ಪಷ್ಟ ವಿವರಣೆ ಸಿಕ್ಕಿಲ್ಲ. ಚೀನಾ ಸೇನಾಪಡೆಯ ಪ್ರಚೋದನಕಾರಿ ವರ್ತನೆ, ಭಾರತ-ಚೀನಾ ಮಧ್ಯೆ ಏರ್ಪಟ್ಟಿದ್ದ ದ್ವಿಪಕ್ಷೀಯ ಒಪ್ಪಂದ ಮತ್ತು ಶಿಷ್ಟಾಚಾರಗಳನ್ನು ಮುರಿದಿದೆ ಎಂದು ಕಂಡುಬರುತ್ತಿದೆ ಎಂದು ಸಭೆಯಲ್ಲಿ ಜೈಶಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

       ಗಡಿ ವಾಸ್ತವ ರೇಖೆ, ಗಡಿ ವಿಚಾರದ ಕುರಿತಂತೆ ಎರಡೂ ದೇಶಗಳು ಮಾಡಿಕೊಂಡಿದ್ದ ಒಪ್ಪಂದಗಳನ್ನು ಪಾಲಿಸಲು ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತ ಚೀನಾ ದೇಶದಿಂದ ನಿರೀಕ್ಷಿಸುತ್ತಿದ್ದು, ಚೀನಾ ಇದಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

       ಇಂದು ಬೆಳಗ್ಗೆ ಭಾರತ-ಚೀನಾ ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ, ಗಡಿ ವಿವಾದ ಭುಗಿಲೇಳಲು ಬಿಡಬಾರದು, ವಿವಾದ ವ್ಯತ್ಯಾಸಗಳನ್ನು ತರಲು ಎರಡೂ ದೇಶಗಳ ಮಧ್ಯೆ ಅಂತರ ತರಲು ಬಿಡಬಾರದು ಎಂದು ತೀರ್ಮಾನಕ್ಕೆ ಬಂದಿರುವುದಾಗಿ ತಿಳಿದುಬಂದಿದೆ. ಈಗ ಗಡಿಯಲ್ಲಿ ಏನು ಪರಿಸ್ಥಿತಿಯಿದೆ ಅದು ಇಬ್ಬರಿಗೂ ಇಷ್ಟವಿಲ್ಲದ ಸ್ಥಿತಿಯಾಗಿದೆ ಎಂದು ಉಭಯ ನಾಯಕರು ಹೇಳಿರುವುದಾಗಿ ತಿಳಿದುಬಂದಿದೆ.

    ಸದ್ಯ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಎರಡೂ ದೇಶಗಳ ಜನರಿಗೆ ಸಮಾಧಾನ, ಖುಷಿ ನೀಡುತ್ತಿಲ್ಲ. ಎರಡೂ ಕಡೆಯ ಸೇನಾಪಡೆಗಳು ಮಾತುಕತೆ ಮುಂದುವರಿಸಿ ತಕ್ಷಣವೇ ಸೈನ್ಯವನ್ನು ಹಿಂತೆಗೆದುಕೊಂಡು ಸರಿಯಾದ ಅಂತರ ಕಾಯ್ದುಕೊಂಡು ಉದ್ವಿಗ್ನ ಪರಿಸ್ಥಿತಿಯನ್ನು ನಿವಾರಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries