ಕಾಸರಗೋಡು: ಲೈಫ್ ಮಿಷನ್ ಸಮುಚ್ಚಯ ನಿರ್ಮಾಣ ಚಟುವಟಿಕೆ ಉದ್ಘಾಟನೆ ಇಂದು
(24) ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ಮಾಣ ಕಾಮಗಾರಿಗೆ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಚಾಲನೆ ನೀಡುವರು.
ಜಾಗವೂ, ಮನೆಯೂ ಇಲ್ಲದ ಮಂದಿಗೆ ಲೈಫ್ ಮಿಷನ್ ಯೋಜನೆಯ ಮೂಲಕ ವಸತಿ ಒದಗಿಸುವ ಕಾರ್ಯಕ್ರಮದ ಮೂರನೇ ಹಂತವಾಗಿ ಜಿಲ್ಲೆಯ ಪೈಲೆಟ್ ಯೋಜನೆಯ ನಿರ್ಮಾಣದ ಉದ್ಘಾಟನೆ ಈ ವೇಳೆ ನಡೆಯುವುದು. ಚೆಮ್ನಾಡ್ ಗ್ರಾಮ ಪಂಚಾಯತ್ ನ ಸ್ವರಾಜ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 11.30ಕ್ಕೆ ನಡೆಯುವ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಶಿಲಾಫಲಕ ಅನಾವರಣ ನಡೆಸುವರು. ಸಂಸದ ರಾಜ್ ಮೂಹನ್ ಉಣ್ಣಿತ್ತಾನ್, ಶಾಸಕ ಕೆ.ಕುಂuಟಿಜeಜಿiಟಿeಜರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಖ್ಯ ಅತಿಥಿಗಳಾಗಿರುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿ.ಎಚ್.ಮಹಮ್ಮದ್ ಕುಂuಟಿಜeಜಿiಟಿeಜ ಚಾಯಿಂಡಡಿ, ಚೆಮ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಖಾದರ್ ಕಲ್ಲಟ್ರ, ಲೈಫ್ ಮಿಷನ್ ಜಿಲ್ಲಾ ಸಂಚಾಲಕ ಎಂ.ವತ್ಸನ್, ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿರುವರು.
ಲೈಫ್ ಮಿಷನ್ ಸಮುಚ್ಚಯ ನಿರ್ಮಾಣ ಚಟುವಟಿಕೆಗಳಿಗೆ ಉದ್ಘಾಟನೆ 24ರಂದು ನಡೆಯಲಿದ್ದು, ಜಾಗವೂ, ಮನೆಯೂ ಇಲ್ಲದ ಮಂದಿಗೆ ಲೈಫ್ ಮಿಷನ್ ಯೋಜನೆಯ ಮೂಲಕ ವಸತಿ ಒದಗಿಸುವ ಕಾರ್ಯಕ್ರಮದ ಮೂರನೇ ಹಂತವಾಗಿ ಜಿಲ್ಲೆಯ ಪೈಲೆಟ್ ಯೋಜನೆಯ ನಿರ್ಮಾಣದ ಉದ್ಘಾಟನೆ ಮೂಲಕ ಮಗದೊಂದು ಯಶೋಗಥೆಗೆ ಮುನ್ನಡಿ ಬರೆಯಲಾಗುತ್ತಿದೆ.
ಚೆಮ್ನಾಡ್ ಗ್ರಾಮ ಪಂಚಾಯತ್ ನ ಒಂದು ಎಕ್ರೆ ಜಾಗದಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದೆ. 44 ಕುಟುಂಬಗಳು ಏಕಕಾಲಕ್ಕೆ ವಸತಿ ಹೂಡುವ ಸೌಲಭ್ಯಗಳೊಂದಿಗೆ ಮೊದಲ ಹಂತದ ನಿರ್ಮಾಣ ನಡೆಯಲಿದೆ. ಎಲ್.ಜಿ.ಎಸ್.ಎಫ್-ಪ್ರೀಫಾಬ್ ಎಂಬ ಅತ್ಯಧುನಿಕ ತಂತ್ರಜ್ಞಾನ ಬಳಸಿ 50 ಸೆಂಟ್ಸ್ ಜಾಗದಲ್ಲಿ 4 ಹಂತದ ಕಟ್ಟಡ ನಿರ್ಮಿಸಲಾಗುತ್ತಿದೆ. 26,84 ಚದರ ಅಡಿಯ ವಿಸ್ತೀರ್ಣದ ಸಮುಚ್ಚಯದಲ್ಲಿ ತಲಾ 511 ಚದರ ಅಡಿ ವ್ಯಕ್ತಿಗತ ಯೂನಿಟ್ ಗಳಿವೆ. ಎರಡು ಬೆಡ್ ರೂಂ ಗಳು, ಹಾಲ್, ಅಡುಗೆಮನೆ, ಶೌಚಾಲಯ ಸಹಿತ ಒಂದು ಯೂನಿಟ್ ಇರುವುದು. ಇದಲ್ಲದೆ ಅಂಗನವಾಡಿ, ಗ್ರಂಥಾಲಯ, ವೃದ್ಧರ ಶುಶ್ರೂಷೆ ಕೇಂದ್ರ, ಕಾಮನ್ ರೂಂ, ಸಿಂಕ್ ರೂಂ, ತ್ಯಾಜ್ಯ ಸಂಸ್ಕರಣೆ ಕೇಂದ್ರ, ಸೌರಶಕ್ತಿ ಸೌಲಭ್ಯ ಇತ್ಯಾದಿಗಳೂ ಇರುವುವು. ಇದರಲ್ಲಿ ಗ್ರೌಂಡ್ ಫೆÇ್ಲೀರ್ ನ ಎರಡು ಫ್ಲಾಟ್ ಗಳು ದೈಹಿಕ ವಿಶೇಷಚೇತನತೆ ಹೊಂದಿರುವವರಿಗಾಗಿ ವಿಶೇಷ ರೀತಿ ರಚಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿಯಿಂದ 1.5 ಕಿಮೀ ಅಂತರದಲ್ಲಿ ಚಟ್ಟಂಚಾಲ್-ದೇಳಿ ರಸ್ತೆಯ ಸಮೀಪ ಈ ಸಮುಚ್ಚಯ ನಿರ್ಮಾಣಗೊಳ್ಳಲಿದೆ. ಕಿಫ್ ಬಿ ಮೂಲಕ ಕೇರಳ ಜಲಪ್ರಾಧಿಕಾರ ಚೆಮ್ನಾಡ್ ಗ್ರಾಮ ಪಂಚಾಯತ್ ನ ವಿವಿಧ ಪ್ರದೇಶಗಳಿಗೆ ಒದಗಿಸಲಾದ ನೀರಿನ ಸರಬರಾಜು ಸೌಲಭ್ಯ ಮೂಲಕವೇ ಇಲ್ಲಿಗೂ ನೀರು ಪೂರೈಕೆ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು.
ಇದಕ್ಕೆ 6.64 ಕೋಟಿ ರೂ. ಯೋಜನೆ ನಿಧಿಯಾಗಿರುವುದು. ತ್ರಿಶೂರು ಡಿಸ್ಟ್ರಿಕ್ಟ್ ಲೇಬರ್ ಕಾಂಟ್ರಾಕ್ಟ್ ಸರ್ವೀಸ್ ಸೊಸೈಟಿಯ ಮೇಲ್ನೋಟದಲ್ಲಿ ಪೆನ್ನಾರ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ನಿರ್ಮಾಣ ಚಟುವಟಿಕೆ ನಡೆಸಲಿದೆ.