ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಸಂಸದ ಕೆ ಮುರಾಲೀಧರನ್ ತೀವ್ರವಾಗಿ ಟೀಕಿಸಿದ್ದಾರೆ. ಅವರು ತಮ್ಮ ಪೇಸ್ ಬುಕ್ ಪುಟದಲ್ಲಿ ತೀವ್ರ ವಾಗ್ದಾಳಿ ನಡೆಸಿ ರಾಜ್ಯದಲ್ಲಿ ಚಿನ್ನದ ಕಳ್ಳಸಾಗಣೆ ಮತ್ತು ಕಪ್ಪು ಹಣದ ಮಾರುಕಟ್ಟೆ ವ್ಯಾಪಕವಾಗಿದೆ. ಪಿಣರಾಯಿ ಸರ್ಕಾರವು ಸಾಹಸ ಮತ್ತು ಲೈಂಗಿಕತೆಯನ್ನು ಬಿಂಬಿಸುವ ಚಲನಚಿತ್ರವಾಗಿ ಮಾರ್ಪಟ್ಟಿದೆ. ಸಚಿವರ ಮಗನ ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಬರೆದಿದ್ದಾರೆ.
ಚಿನ್ನ ಸಾಗಾಟ ಪ್ರಕರಣದಲ್ಲಿ ಸಂಬಂಧ ಹೊಮದಿರುವ ಸಚಿವ ಕೆ.ಟಿ.ಜಲೀಲ್ ಅವರು ರಾಜೀನಾಮೆ ನೀಡದಿದ್ದರೆ ಅವರನ್ನು ವಜಾಗೊಳಿಸಬೇಕಿತ್ತು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇ.ಡಿ. ಅವರನ್ನು ಪ್ರಶ್ನಿಸಿದ್ದು, ಇದು ಭಾರತದಲ್ಲೇ ವಿಚಾರಣೆಗೊಳಗಾದ ಮೊದಲ ಸಚಿವ ಎಂಬ ಕುಖ್ಯಾತಿಗೆ ಪಾತ್ರವಾಗಿದೆ ಎಂದು ಮುರಳೀಧರನ್ ಬರೆದಿದ್ದಾರೆ. ಹವಾಮಾನ ಬದಲಾವಣೆ ಅಥವಾ ಬಿರುಸಿನ ಮಳೆಯ ಬಗ್ಗೆ ಇ.ಡಿ. ಸಚಿವ ಜಲೀಲ್ ಅವರನ್ನು ಪ್ರಶ್ನಿಸಿಲ್ಲ, ಆದರೆ ಯುಡಿಎಫ್ ಆಡಳಿತದ ಅವಧಿಯಲ್ಲಿ ಇಂತಹ ವಿಚಾರಣೆ ನಡೆದಿದ್ದರೆ ಏನಾಗಬಹುದಿತ್ತು ಎಂದು ಮುರಳೀಧರನ್ ಪ್ರಶ್ನಿಸಿದ್ದಾರೆ.
ಯುಡಿಎಫ್ ಅವಧಿಯಲ್ಲಿ ಇ.ಪಿ. ಜಯರಾಜನ್ ಸೇರಿದಂತೆ ಸಚಿವರು ಈ ಹಿಂದೆ ರಾಜೀನಾಮೆ ನೀಡಿದ್ದನ್ನು ಉಲ್ಲೇಖಿಸಿದ ಮುರಲೀಧರನ್, ಸಿಪಿಎಂ ಕೇಂದ್ರ ಸಮಿತಿ ಸದಸ್ಯರಿಗೆ ಜಲೀಲ್ ಯಾವ ಪರಿಗಣನೆ ಹೊಂದಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಹೇಳಿದರು. ಮಂತ್ರಿ ಪುತ್ರರಿಗೆ ಲೈಫ್ ಮಿಷನ್‍ನಲ್ಲಿ ಪಾಲುದಾರಿಕೆ ಇದೆ ಎಂಬ ಸುದ್ದಿ ಬರುತ್ತಿದೆ. ಸ್ವಪ್ನಾ ಸುರೇಶ್ ಗೆ ಸಚಿವರು ಮತ್ತವರ ಪುತ್ರರೊಂದಿಗೆ ಸಂಬಂಧವಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಅವರು ಆರೋಪಿಸಿದರು.
ಪ್ರತಿಪಕ್ಷಗಳು ಉಪಚುನಾವಣೆಯಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಯಾವಾಗಲೂ ಚುನಾವಣೆಗಳಿಗೆ ಹಪಹಪಿಸುವ ಎಡರಂಗ ಈಗ ಜೀವ ಕೋವಿಡ್ ಕಾರಣ ಭಯದಿಂದ ಉಪಚುನಾವಣೆಗೆ ಮುಂದಾಗುತ್ತಿಲ್ಲ ಎಂದು ಮುರಳೀಧರನ್ ಬೊಟ್ಟುಮಾಡಿದರು.
ಮುರಲೀಧರನ್ ಅವರು ಮತ್ತೆ ರಾಜ್ಯ ರಾಜಕೀಯಕ್ಕೆ ಮರಳುವರೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ರಾಜ್ಯ ರಾಜಕಾರಣದಲ್ಲಿ ವಿಶೇಷವಾಗಿ ಸಕ್ರಿಯರಾಗುವ ಅಗತ್ಯವಿಲ್ಲ. ಅದಕ್ಕೆ ಸಾಮಥ್ರ್ಯವಿರುವ ನೇತಾರರು ಇಲ್ಲಿಯೇ ಇದ್ದಾರೆ ಎಂದು ಹೇಳಿದರು. ಸಂಸದರು ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಗತ್ಯ ಈಗಿಲ್ಲ ಎಂದು ಅವರು ಪೋಸ್ಟ್ ನಲ್ಲಿ ಹೇಳಿರುವರು.