ಮಂಗಳೂರು: ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಕೋವಿಡ್ ಕಾರಣ ನಿಧನರಾದರೆಂಬ ವಾರ್ತೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ರಾತ್ರಿ ಹರಿದಾಡತೊಡಗಿದ್ದು ಅಂತಹದೊಂದು ನಡೆದಿಲ್ಲ ಎಂದು ಶಾಸ್ತ್ರಿಗಳ ಪುತ್ರ ಮುರಳೀಕೃಷ್ಣ ಶಾಸ್ತ್ರಿ ಹಾಗೂ ಯಕ್ಷಗುರು ಸಬ್ಬಣಕೋಡಿ ರಾಮ ಭಟ್ ಸಮರಸ ಸುದ್ದಿಗೆ ತಿಳಿಸಿರುವರು.
ಶಾಸ್ತ್ರಿಗಳು ಅನಾರೋಗ್ಯ ಕಾರಣ ಮಂಗಳೂರು ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿರುವುದು ಹೌದಾದರೂ ಚಿಕಿತ್ಸೆ ಮುಂದುವರಿದಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.