ಕಾಸರಗೋಡು: ಹಸುರಾದ ಬಂಜರು ಭೂಮಿಯ ಜೊತೆಗೆ ಶುಚಿತ್ವ ಪಟ್ಟದ ಗರಿಮೆ ಪಡೆದಿದೆ ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್.
ಈ ಸಂಬಂಧ ನಡೆದ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್ ಶುಚಿತ್ವ ಪದವಿ ಪಡೆದಿರುವ ಬೆಗಿನ ಘೋಷಣೆ ನಡೆಸಿದರು. ಉಪಾಧ್ಯಕ್ಷ ಕೃಷ್ಣನ್ ಪಿ.ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಮುಖ್ಯ ಅತಿಥಿಯಾಗಿದ್ದರು. ಗೂಗಲ್ ಮೀಟ್ ಮೂಲಕ ಎಲ್ಲ ಸದಸ್ಯರೂ ಭಾಗವಹಿಸಿದ್ದರು. ಗ್ರಾಮ ವಿಸ್ತರಣೆ ಅಧಿಕಾರಿ ಆರ್.ಜಿತೇಷ್ ವರದಿ ವಾಚಿಸಿದರು. ಕಾರ್ಯದರ್ಶಿ ಜಯನ್ ಪಿ. ಸ್ವಾಗತಿಸಿದರು.