ಮಂಜೇಶ್ವರ: ಇಂಡಿಯನ್ ನೇಶನಲ್ ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿ ಸಭೆಯು ವರ್ಕಾಡಿ ಸುಂಕದಕಟ್ಟೆಯ ಸಭಾಂಗಣದಲ್ಲಿ ಮಂಡಲ ಅಧ್ಯಕ್ಷ ವಸಂತಕುಮಾರ್ ಕಣಿಯೂರು ರವರ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆಯಿತು.
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎಂ.ಕೆ. ಮುಹಮ್ಮದ್ ರವರು ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಅವರು ಮಾತನಾಡಿ ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನದ್ರೋಹಿ ಆಡಳಿತದ ಬಗ್ಗೆ ಸವಿವರವಾಗಿ ಸಭೆಯ ಮುಂದೆ ವಿವರಿಸಿದರು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ಆಡಳಿತದಲ್ಲಿ ಮುಖ್ಯಮಂತ್ರಿ ಕಛೇರಿಯು ಕಳ್ಳ ಸಾಗಾಟಕಾರ ಮಾಫಿಯಾ ಸಂಘಗಳ ಕೇಂದ್ರವಾಗಿ ಪರಿವರ್ತಿತವಾಗಿದೆ. ಎಂದರು. ಕೊಲೆ ಮತ್ತು ಆಕ್ರಮ ರಾಜಕೀಯದಿಂದ ಕೇರಳದಲ್ಲಿ ಜನಸಾಮಾನ್ಯರ ಜೀವ ಮತ್ತು ಸೊತ್ತುಗಳಿಗೆ ಬೆಲೆ ಇಲ್ಲದಂತಾಗಿದೆ. ಮುಂದೆ ಬರಲಿರುವ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಸಿಪಿಎಂ ನ ಭದ್ರಕೋಟೆಗಳು ತತ್ತರಿಸಲಿವೆ ಎಂಬುದು ಅವರಿಗೆ ಮನವರಿಕೆಯಾಗಿದ್ದು ,ಇದೀಗ ಕಳ್ಳ ಪ್ರಚಾರ ಮಾಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತು ಕಛೇರಿಗಳನ್ನು ಮುಂದಿಟ್ಟು ಅಕ್ರಮ ರಾಜಕೀಯಕ್ಕೆ ಮುಂದಾಗಿರುವುದನ್ನು ಜನಸಾಮಾನ್ಯರು ಕ್ಷಮಿಸಲಾರರು. ದೇಶದ ಮತ್ತು ರಾಜ್ಯದ ಆರ್ಥಿಕತೆ ದೀವಾಳಿ ಅಂಚಿನಲ್ಲಿರುವಾಗ ಇಲ್ಲಿನ ಕಾರ್ಪರೇಟ್ ಗಳು ಮಿಲಿಯಾಧೀಶರಾಗುತ್ತಿದ್ದರೆ, ಕೂಲಿ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕ ವ್ಯಾಪಾರಿ ವರ್ಗಗಳು ಬೀದಿಪಾಲಾಗುತ್ತಿದ್ದಾರೆ. ಸುಭಧ್ರ ಭಾರತ ಮತ್ತು ಸಮೃದ್ಧಿಯ ಕೇರಳ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ನೇತಾರರಾದ ಪ್ರಭಾಕರ ನಾಯಕ್, ಪ್ರಕಾಶ್ ನಾಯಕ್, ಸದಾಶಿವ ಕೆ, ಮುಹಮ್ಮದ್ ಮಜಾಲ್, ಸದಾಶಿವ ಪಜ್ವ, ನಾರಾಯಣ ಶೆಟ್ಟಿ ಪಾವೂರು, ಗಣೇಶ ಪಾವೂರು, ಪಂಚಾಯತಿ ಉಪಾಧ್ಯಕ್ಷೆ ಸುನಿತಾ ಡಿ ಸೋಜಾ, ಸೀತಾ, ಉಮ್ಮರ್ ಪಾಲೆಂಗ್ರಿ, ಶಶಿಧರ್ ನಾಯ್ಕ್, ಅಬೂಬಕ್ಕರ್ ಪೆÇಯ್ಯ, ಹನೀಫ್ ಕುಮೇರ್, ವಿನೋದ್ ಪಾವೂರು ಮುಂತಾದವರು ಭಾಗವಹಿಸಿದ್ದರು. ಹಮೀದ್ ಕಣಿಯೂರು ಸ್ವಾಗತಿಸಿ, ಅಝೀಝ್ ಕಲ್ಲೂರು ವಂದಿಸಿದರು.