ನವದೆಹಲಿ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನಿಂದ ಸಾಕಷ್ಟು ಜನರು ಗುಣಮುಖರಾಗುತ್ತಿದ್ದಾರೆ. ನಮ್ಮ ಹೋರಾಟ ಕೊರೋನಾವನ್ನು ಮಟ್ಟಹಾಕುವುದಕ್ಕಾಗಿಯೇ ವಿನಃ ರಾಜಕೀಯಕ್ಕಾಗಿ ಅಲ್ಲ ಎಂದ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಗುರುವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಕೊರೋನಾ ವೈರಸ್ ಕುರಿತ ದೇಶದ ಬೆಳವಣಿಗೆ ಕುರಿತು ಮಾತನಾಡಿದ ಆರೋಗ್ಯ ಸಚಿವರು, ದೇಶದಲ್ಲಿ ದಾಖಲಾಗುತ್ತಿರುವ ಬಹುತೇಕ ಸೋಂಕು ಪ್ರಕರಣಗಳು ಮಹಾರಾಷ್ಟ್ರದಿಂದಲೇ ವರದಿಯಾಗುತ್ತಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ರಾವತ್ ಅವರು, ನನ್ನ ತಾಯಿ ಹಾಗೂ ನನ್ನ ಸಹೋದರನಿಗೂ ಕೊರೋನಾ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಬಹುತೇಕ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಧರವೀಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಬಿಎಂಸಿಯ ಪರಿಣಾಮಕಾರಿ ಕಾರ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ. ನಿನ್ನೆಯಷ್ಟೇ ಕೆಲ ಸದಸ್ಯರು ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿದ್ದರು, ಅಂತಹವರಿಗೆ ಈ ಮಾಹಿತಿ ನೀಡಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.
ಎಷ್ಟೊಂದು ಸಂಖ್ಯೆಯಲ್ಲಿ ಜನರು ಹೇಗೆ ಗುಣಮುಖರಾದರೂ? ಹಪ್ಪಳ ತಿಂದು ಗುಣಮುಖರಾಗಿದ್ದಾರೆಯೇ? ಕೊರೋನಾ ವಿರುದ್ಧದ ಹೋರಾಟ ರಾಜಕೀಯ ಹೋರಾಟವಲ್ಲ, ಜನರ ಜೀವ ಉಳಿಸುವ ಹೋರಾಟವಾಗಿದೆ ಎಂದು ತಿಳಿಸಿದ್ದಾರೆ.