ತಿರುವನಂತಪುರ: ನಕಲಿ ಸಹಿ ವಿವಾದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಸಂಜೆ ದೈನಂದಿನ ಕೋವಿಡ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದು ಸಹಿ ತನ್ನದೇ ಎನ್ನುವುದನ್ನು ಖಾತ್ರಿಪಡಿಸಿದದಾರೆ. ಮತ್ತು ಮಲಯಾಳಂ ಭಾಷಾ ದಿನಾಚರಣೆಯ ಅಂಗವಾಗಿರುವ ಫೈಲ್ ಮಾತ್ರವಲ್ಲದೆ ಇತರ ಪೈಲ್ ಗಳಿಗೂ ಸಹಿ ಮಾಡಿರುವುದಾಗಿ ಸಿಎಂ ತಮ್ಮ ಐಪಾಡ್ ನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಖಾತ್ರಿಪಡಿಸಿದರು.
2008ರ ಸೆಪ್ಟೆಂಬರ್ 6 ರಂದು ಅಮೇರಿಕಾಕ್ಕೆ ಭೇಟಿ ನೀಡಿದ 39 ಫೈಲ್‍ಗಳಿಗೆ ಸಹಿ ಹಾಕಲಾಗಿದೆ ಎಂದರು. ಮಾಜಿ ಕಾರ್ಯದರ್ಶಿ ಎಂ.ಶಿವಶಂಕರಾ ಸಂದರ್ಭ ಬೇನಾಮಿಯಾಗಿ ಮುಖ್ಯಮಂತ್ರಿಗಳಿಂದ ಯಾವುದೇ ಪರಿಶೀಲನೆಗಳಿಲ್ಲದೆ ಸಹಿ ಮಾಡಿರುವರೆಂದು ಬಿಜೆಪಿಯ ಆರೋಪವನ್ನು ತಳ್ಳಿ ಪಿಣರಾಯಿ ವಿಜಯನ್ ಸಾಕ್ಷ್ಯಗಳನ್ನು ಒದಗಿಸಿದರು.
ತಾನು ಅಮೇರಿಕಾದಲ್ಲಿದ್ದ ವೇಳೆ 6 ನೇ ದಿನ ಫೈಲ್ ಕಳುಹಿಸಲಾಗಿದೆ. ಅದಕ್ಕೆ ಸಹಿ ಮಾಡಿ ವಾಪಸ್ ಕಳುಹಿಸಲಾಗಿದೆ ಎಂದು ಸಿಎಂ ಹೇಳಿದರು. ಈ ಸಂಬಂಧ ತನ್ನ ಬಳಿ ಎಲ್ಲಾ ಸಮರ್ಥನೀಯ ದಾಖಲೆಗಳಿವೆ. ಆರನೇ ದಿನ 39 ಫೈಲ್‍ಗಳಿಗೆ ಸಹಿ ಮಾಡಿ ವಾಪಸ್ ಕಳುಹಿಸಲಾಗಿದೆ. ಪ್ರತಿದಿನ ಫೈಲ್ ನ್ನು ಈ ರೀತಿ ಕಳುಹಿಸಲಾಗುತ್ತದೆ. ನಾನು ಎಲ್ಲವನ್ನೂ ನೋಡುತ್ತೇನೆ, ಸ್ವೀಕರಿಸುತ್ತೇನೆ, ಸಹಿ ಮಾಡಿ ಹಿಂದಕ್ಕೆ ಕಳುಹಿಸುತ್ತೇನೆ. ಸಹಿ ನಕಲಿ ಅಲ್ಲ." ಎಂದು ದೃಢಪಡಿಸಿದರು.
ಮುಖ್ಯಮಂತ್ರಿ ಯುಡಿಎಫ್ ವಿರುದ್ಧವೂ ಈ ಸಂದರ್ಭ ವಾಗ್ದಾಳಿ ನಡೆಸಿದರು. "ಯುಡಿಎಫ್ ಬಿಜೆಪಿ ಹೇಳಿಕೆಗಳನ್ನು ಅನುಸರಿಸುತ್ತದೆ. ಬಿಜೆಪಿ ಆರೋಪಿಸುತ್ತದೆ. ಯುಡಿಎಫ್ ಅದನ್ನು ಅನುಮೋದಿಸುತ್ತದೆ. ಆದರೆ ಕುಂಞಲಿಕುಟ್ಟಿಗೆ ಇದು ತಿಳಿಯುತ್ತಿಲ್ಲ. ಬಿಜೆಪಿಯ ಆರೋಪಗಳನ್ನು ಲೀಗ್ ವಹಿಸಿಕೊಳ್ಳುತ್ತಿದೆ. ಆರೋಪ ಹೇರುವಲ್ಲಿ ತಾನು ಮುಂಚೂಣಿಯಲ್ಲಿರಬೇಕು ಎಂದು ಲೀಗ್ ಭಾವಿಸಬಹುದು. ಆದರೆ ಆರೋಪಗಳನ್ನು ಪರಾಮರ್ಶಿಸುವ ಗುಣ ಲೀಗ್ ಗೆ ಏಕಿಲಲ್ ಎಂದು ಸಿಎಂ ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರು ಫೈಲ್ ಗಳನ್ನು ಹೇಗೆ ಪಡೆದರು ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಸಿಎಂ ಹೇಳಿದರು. ಕ್ಯೂ ಆರ್ ಕೋಡ್‍ನ ಸ್ಕ್ಯಾನ್ ನ್ನು ಕೋಝಿಕ್ಕೋಡ್ ನಲ್ಲಿ ಜಾರಿಗೆ ತರಲಾಗಿದೆ. ಇತರ ವಿವರಗಳನ್ನು ಬಳಿಕ ಪರಿಶೀಲಿಸಲಾಗುವುದು. ಫೈಲ್ ಐಪಾಡ್‍ನಲ್ಲಿರುತ್ತದೆ. ಡಿಜಿಟಲ್ ಸಿಗ್ನೇಚರ್ ಅನ್ನು ಈ ಮೂಲಕ ಮಾಡಲಾಗುತ್ತಿದೆ. ಅಗತ್ಯದ ಸಾಫ್ಟ್ ವೇರ್ ನ್ನು ಬಳಸಲಾಗುತ್ತಿದೆ. ನಾನು ತಿರುವನಂತಪುರದಿಂದ ಹೊರಗಿದ್ದಾಗಲೆಲ್ಲಾ ಇದನ್ನು ಬಳಸಲಾಗುತ್ತಿತ್ತು. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳಿದರು.