ಉಪ್ಪಳ: ದೇಶ ನಿರ್ಮಾಣದ ಕಾಯಕವೂ ಕಾರ್ಮಿಕರಿಂದ ಸಾಧ್ಯ. ಇದಕ್ಕಾಗಿ ತ್ಯಾಗ ಹಾಗೂ ಸಮರ್ಪಣ ಮನೋಭಾವ ನಮ್ಮಲ್ಲಿರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರ್ಯವಾಹ ಸುಕುಮಾರ ಕೊಜಪ್ಪೆ ಹೇಳಿದರು.
ಅವರು ಭಾರತೀಯ ಮಜ್ದೂರ್ ಸಂಘ (ಬಿ ಎಂ ಎಸ್) ಪೈವಳಿಕೆ ಘಟಕದ ವತಿಯಿಂದ ಗುರುವಾರ ವಿಶ್ವಕರ್ಮ ಜಯಂತಿಯ ಪ್ರಯುಕ್ತ ನಡೆದ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದರು.
ಒಬ್ಬ ಸಾಮಾನ್ಯ ಕಾರ್ಮಿಕನಾಗಿದ್ದರು ತನ್ನ ಸಂಘಟನಾ ಚಾತುರ್ಯದಿಂದ ಕಾರ್ಯನಿರ್ವಹಿಸಿ ಸಮಾಜದ ಕೆಲಸ ಮಾಡಲು ಸಾಧ್ಯವಿದೆ. ಅಂತಹ ಹಲವಾರು ಮಂದಿ ಸಾಮಾನ್ಯರು ಕೂಡ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಇದಕ್ಕಾಗಿ ಸಮಾಜಮುಖಿಯಾದ ಚಿಂತನೆ ಹಾಗೂ ಸಮಾಜ ಕಾರ್ಯಕ್ಕೆ ಸಮಯ ಸಮರ್ಪಣೆ ಮಾಡಬೇಕಾಗುತ್ತದೆ. ಭಾರತೀಯ ಮಜ್ದೂರ್ ಸಂಘ ದೇಶದಾದ್ಯಂತ ಇರುವ ಕಾರ್ಮಿಕರ ಹಿತರಕ್ಷಣೆ ಜೊತೆಗೆ ದೇಶದ ಹಿತರಕ್ಷಣೆ ಮಾಡುವ ಏಕೈಕ ಸಂಘಟನೆ ಎಂದು ಹೇಳಿದರು.
ಕಾರ್ಯಕ್ರಮ ಮೊದಲಿಗೆ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಂ.ಎಸ್ ನ ಪೈವಳಿಕೆ ಘಟಕದ ಅಧ್ಯಕ್ಷ ದೇವಿಪ್ರಸಾದ್ ವಹಿಸಿದ್ದರು. ಕುಂಬಳೆ ವಲಯ ಕಾರ್ಯದರ್ಶಿ ಐತ್ತಪ್ಪ ನಾರಾಯಣಮಂಗಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕರ್ಷಕ ಮೋರ್ಚಾ ಮಂಡಲಾಧ್ಯಕ್ಷ ಸದಾಶಿವ ಚೇರಾಲು, ಬಿ.ಎಂ.ಎಸ್.ಪೈವಳಿಕೆ ಪಂಚಾಯತಿ ಕಾರ್ಯದರ್ಶಿ ರಾಜೇಶ್ ಪೆರ್ಮುದೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಧ್ಯಾ ಪ್ರಾರ್ಥನಾಗೀತೆ ಹಾಗೂ ಶ್ರೀಲತಾ ಮಜ್ದೂರ್ ಗೀತೆ ವಾಚಿಸಿದರು. ಪುಷ್ಪಕಲಾ ವಂದಿಸಿದರು. ಕೃಷ್ಣ ಕೆ ನಿರೂಪಿಸಿದರು.