ಕಾಸರಗೋಡು: ಸೆ.9 ವರೆಗೆ ರಾಜ್ಯದ ವಿವಿಧೆಡೆ ಗುಡುಗು-ಸಿಡಿಲ ಸಹಿತ ಬಿರುಸಿನ ಮಳೆ ಸುರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕತೆ ಪಾಲಿಸುವಂತೆ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆಯ ನಡುವಿನ ಅವ„ಯಲ್ಲಿ ಸಿಡಿಲು ತಲೆದೋರುವ ಸಾಧ್ಯತೆ ಅ„ಕವಾಗಿದೆ. ಮಲೆನಾಡಿನಲ್ಲಿ ಇದರ ಸಾಧ್ಯತೆ ಹೆಚ್ಚಿದೆ. ಜೀವ ಹಾನಿ, ವಿದ್ಯುನ್ಮಾನ ಸಾಮಾಗ್ರಿಗಳಿಗೆ ಹಾನಿ ಸಹಿತ ನಾಶ-ನಷ್ಟಗಳಿಗೆ ಕಾರಣವಾಗುವ ಭೀತಿಯಿದೆ. ಸೂಚನೆಯಿಲ್ಲದೆ, ಕಣ್ಣಿಗೆ ಗೋಚರವಿಲ್ಲದೆ ಸಿಡಿಲು ಬಡಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರಿಮುಗಿಲು ಕಾಣಿಸಿಕೊಂಡ ತತ್‍ಕ್ಷಣವೇ ಸಾರ್ವಜನಿಕರು ಈ ಕೆಳಗೆ ತಿಳಿಸಲಾಗುವ ಜಾಗರೂಕತೆ ಪಾಲಿಸುವಂತೆ ತಿಳಿಸಲಾಗಿದೆ.
ಮಕ್ಕಳ ವಿಶೇಷ ಗಮನಕ್ಕೆ : ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆ ವರೆಗೆ ಮೋಡ ಕವಿದಿರುವ ಅವ„ಯಲ್ಲಿ ಬಯಲು ಪ್ರದೇಶಗಳಲ್ಲಿ, ಮನೆಯ ತಾರಸಿಯಲ್ಲಿ ಮಕ್ಕಳು ಆಟವಾಡಕೂಡದು.
ಸಾರ್ವಜನಿಕರಿಗೆ ಸೂಚನೆಗಳು : ಗುಡುಗು-ಸಿಡಿಲಿನ ಮೊದಲ ಹಂತದ ಸೂಚನೆಗಳು ಲಭಿಸುತ್ತಿದ್ದಂತೆಯೇ ಸುರಕ್ಷಿತ ತಾಣಗಳನ್ನು ಸೇರಿಕೊಳ್ಳಬೇಕು. ಮೋಡ ಕವಿದ ವಾತಾವರಣದ ವೇಳೆ ಗುಡುಗು-ಸಿಡಿಲು ಕಾಣಿಸಿಕೊಂಡರೆ, ಮನೆಯ ತಾರಸಿ, ಅಂಗಳದಲ್ಲಿ ಒಗೆದು ಒಣಗಲು ಹಾಕಿದ ಬಟ್ಟೆ ತೆರವುಗೊಳಿಸಲು ತೆರಳಕೂಡದು. ವಿದ್ಯುನ್ಮಾನ ಸಾಮಾಗ್ರಿಗಳ ವಿದ್ಯುತ್ ಸಂಪರ್ಕ ಕಡಿಯಬೇಕು. ಕಿಟಿಕಿ-ಬಾಗಿಲುಗಳನ್ನು ಭದ್ರವಾಗಿ ಮುಚ್ಚಬೇಕು. ಈ ಅವಧಿಯಲ್ಲಿ ವಿದ್ಯುನ್ಮಾನ ಸಾಮಾಗ್ರಿಗಳ ಬಳಿಗೆ ತೆರಳಕೂಡದು. ದೂರವಾಣಿ ಬಳಸಕೂಡದು. ಸಿಡಿಲು ತಲೆದೋರುತ್ತಿರುವ ವೇಳೆ ಸ್ನಾನಕ್ಕೆ ತೆರಳಕೂಡದು. ಮನೆಯ ಗೋಡೆ ಯಾ ನೆಲವನ್ನು ಸ್ಪರ್ಶಿಸಕೂಡದು. ಗುಡುಗು-ಸಿಡಿಲು ತಲೆದೋರುವ ವೇಳೆ ಮನೆಯ ತಾರಸಿಯಲ್ಲಿ, ಮರದ ಕೆಳಗೆ, ನಿಲ್ಲಕೂಡದು, ಕುಳಿತುಕೊಳ್ಳಬಾರದು. ಜಲಾಶಯಗಳಲ್ಲಿ ಇಳಿಯಕೂಡದು. ಗಾಳಿಪಟ ಹಾರಿಸಕೂಡದು. ಒಂದೊಮ್ಮೆ ಬಯಲು ಪ್ರದೇಶದಲ್ಲಿ ಇರುವುದಾದಲ್ಲಿ ಸಿಡಿಲು ಕಾಣಿಸಿಕೊಂಡ ವೇಳೆ ಕಾಲುಗಳನ್ನು ಮಡಚಿ ತಲೆಯನ್ನು ಮಡಚಿದ ಕಾಲುಗಳ ನಡುವೆ ಇರಿಸಿ ಚೆಂಡಿನಂತೆ ಕುಳಿತುಕೊಳ್ಳಬೇಕು. ಮನೆಗಳಲ್ಲಿ ಮಿಂಚು ನಿವಾರಕ ಸಾಮಾಗ್ರಿ ಅಳವಡಿಸಬೇಕು. ವಿದ್ಯುನ್ಮಾನ ಸಾಮಾಗ್ರಿಗಳ ಸಂರಕ್ಷಣೆಗಾಗಿ ಸರ್ಜ್ ಪೆÇ್ರಟೆಕ್ಟರ್ ಅಳವಡಿಸಬೇಕು.
ಒಂದೊಮ್ಮೆ ಸಿಡಿಲ ಬಡಿತಕ್ಕೊಳಗಾಗಿ ಸುಟ್ಟ ಗಾಯ, ದೃಷ್ಟಿ, ಶ್ರವಣ ಸಾಮಥ್ರ್ಯ ಮಂದವಾದಲ್ಲಿ, ಹೃದಯಾಘಾತ ಸಂಭವಿಸಿದಲ್ಲಿ, ಆ ವ್ಯಕ್ತಿಯ ಶರೀರದಲ್ಲಿ ವಿದ್ಯುತ್ ಪ್ರವಾಹ ಇನ್ನೂ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ತತ್‍ಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು. ಸಿಡಿಲು ಬಡಿದ ಮೊದಲ 30 ಸೆಕೆಂಡ್ ಗಳು ಜೀವರಕ್ಷಣೆಗೆ ಸುವರ್ಣಾವಕಾಶಗಳಾಗಿವೆ.
ಜಾನುವಾರುಗಳನ್ನು ಸಿಡಿಲು ಬಡಿಯುವ ವೇಳೆ ಬರಿದಾದ ಜಾಗಗಳಲ್ಲಿ ಕಟ್ಟಕೂಡದು. ಮೋಡ ಕಾಣಿಸುವ ವೇಳೆಗೇ ಅವುಗಳನ್ನು ಸುರಕ್ಷಿತ ತಾಣಗಳಿಗೆ ವರ್ಗಾಯಿಸಬೇಕು.