ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆ (ಚುನಾವಣೆ)ಯಲ್ಲಿ ಫೇಸ್ ಬುಕ್ ಹಸ್ತಕ್ಷೇಪ ಮಾಡಿದ್ದು, ರಾಜಕೀಯ ಪಕ್ಷಪಾತ ನಡೆಸಿದೆ ಎಂಬ ಕಾಂಗ್ರೆಸ್ ನ ಆರೋಪಕ್ಕೆ ಫೇಸ್ ಬುಕ್ ಪ್ರತಿಕ್ರಿಯೆ ನೀಡಿದೆ.
ಫೇಸ್ ಬುಕ್ ಪಕ್ಷಪಾತ ಧೋರಣೆ ಅನುಸರಿಸುವುದಿಲ್ಲ. ದ್ವೇಷ ಮತ್ತು ಧರ್ಮಾಂಧತೆಯನ್ನು ಎಂದಿಗೂ ಖಂಡಿಸುತ್ತದೆ. ಅಷ್ಟೇ ಅಲ್ಲದೇ ಜನರಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಹ ವೇದಿಕೆಯಾಗಿರಿಸುವುದಕ್ಕೆ ಶ್ರಮಿಸುತ್ತಿದೆ ಎಂದು ಫೇಸ್ ಬುಕ್ ತಿಳಿಸಿದೆ.
ಕಾಂಗ್ರೆಸ್ ನ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಫೇಸ್‌ಬುಕ್‌ನ ಸಾರ್ವಜನಿಕ ನೀತಿ, ಟ್ರಸ್ಟ್ ಮತ್ತು ಸುರಕ್ಷತಾ ನಿರ್ದೇಶಕರಾದ ನೀಲ್ ಪಾಟ್ಸ್, ಸಾಮಾಜಿಕ ಜಾಲತಾಣ ಸಂಸ್ಥೆ ಪಕ್ಷಪಾತವಿಲ್ಲದ ವೇದಿಕೆಯಾಗಿರುವುದಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಸದಸ್ಯರ ದ್ವೇಷಪೂರಿತ ಪೋಸ್ಟ್ ಗಳ ವಿರುದ್ಧ ಫೇಸ್ ಬುಕ್ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.