ಮಂಜೇಶ್ವರ: ಎಡರಂಗ, ಮುಸ್ಲಿಂ ಲೀಗ್ ಒಂದೇ ನಾಣ್ಯದ ಎರಡು ಮುಖವಾಗಿದೆ. ವಂಚನೆ, ಮೋಸ, ಕಳ್ಳ ಸಾಗಾಟವೇ ಮೊದಲಾದ ಹಿಂಬಾಗಿಲ ವ್ಯವಹಾರಗಳು, ಅಧಿಕಾರ ದುರುಪಯೋಗದ ಮೂಲಮಂತ್ರಗಳಾಗಿವೆ ಎಂದು ಬಿಜೆಪಿ ರಾಜ್ಯ ನೇತಾರ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಆರೋಪಿಸಿದರು. ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಆಗ್ರಹಿಸಿದರು.
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಶಾಸಕರ ರಾಜೀನಾಮೆ, ನ್ಯಾಯಯುತ ತನಿಖೆಗೆ ಆಗ್ರಹಿಸಿ ಮಂಗಳವಾರ ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಸಮಾರೋಪ ಕಾರ್ಯಕ್ರಮದಲ್ಲಿ ಮಂಡಲಾಧ್ಯಕ್ಷ ಮಣಿಕಂಠ ರೈ ಅವರಿಗೆ ನೀರು ವಿತರಿಸಿ, ಸತ್ಯಾಗ್ರಹ ಸಮಾರೋಪಗೊಳಿಸಿ ಅವರು ಮಾತನಾಡಿದರು.
ಮುಖಂಡರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಸದಾಶಿವ ವರ್ಕಾಡಿ, ಚಂದ್ರಶೇಖರ್ ವರ್ಕಾಡಿ, ರಂಜಿತ್ ಮೀಂಜ, ವಸಂತ ಮಯ್ಯ, ಪುಷ್ಪರಾಜ್ ಐಲ್, ಧನರಾಜ್ ಬಾಯರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ. ಸ್ವಾಗತಿಸಿ, ಜಯಂತಿ ಶೆಟ್ಟಿ ವಂದಿಸಿದರು.