ತಿರುವನಂತಪುರ: ಕೇರಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಆಂಬುಲೆನ್ಸ್ ನಲ್ಲಿ ಕೋವಿಡ್ ಪೀಡಿತ ಸ್ತ್ರೀಯ ಮೇಲೆ ಆಂಬುಲೆನ್ಸ್ ಚಾಲಕನೇ ಅತ್ಯಾಚಾರ ಯತ್ನ ನಡೆಸಿದ ಬೆನ್ನಿಗೇ ಕ್ವಾರಂಟೈನ್ ಬಿಡುಗಡೆ ಪ್ರಮಾಣ ಪತ್ರ ನೀಡುವುದಾಗಿ ಮಹಿಳೆಯೊಬ್ಬರನ್ನು ಮನೆಗೆ ಕರೆದು ಅತ್ಯಾಚಾರ
ನಡೆಸಿದ ಕಿರಿಯ ಆರೋಗ್ಯ ನಿರೀಕ್ಷಕನೊಬ್ಬನನ್ನು ತಿರುವನಂತಪುರ ಪಂಗೊಡ್ ಪೆÇಲೀಸರು ಸೋಮವಾರ ಬಂಧಿಸಿದ ಘಟನೆ ನಡೆದಿದೆ.
ಅತ್ಯಾಚಾರಕ್ಕೀಡಾದ ಮಹಿಳೆ ತಿರುವನಂತಪುರ ಜಿಲ್ಲೆಯ ಕುಳತ್ತುಪುಳ ನಿವಾಸಿಯಾಗಿದ್ದು, ಕೆಲಸ ಮಾಡುತ್ತಿದ್ದ ಮಲ್ಲಪುರಂ ನಿಂದ ಮರಳಿ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು. ಕುಳತ್ತಪುಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಿಕ ಪ್ರದೀಪ್ ಬಂಧಿತ ಆರೋಪಿಯಾಗಿದ್ದಾನೆ.
ಆರೋಗ್ಯ ಸಚಿವೆ ಕೆಕೆ ಶೈಲಾಜ ಅವರ ನಿರ್ದೇಶನದ ಮೇರೆಗೆ ಆರೋಗ್ಯ ಇಲಾಖೆ ವಿಚಾರಣೆ ನಡೆಸುತ್ತಿದ್ದು, ಅಮಾನತು ವಿಳಂಬವಾಗಿದೆ. ಐಪಿಸಿ ಸೆಕ್ಷನ್ 376 ( ಅತ್ಯಾಚಾರಕ್ಕಾಗಿ ಶಿಕ್ಷೆ) ಅಡಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 3 ರಂದು ಪ್ರದೀಪ್ ಬಾಡಿಗೆಯಲ್ಲಿದ್ದ ಕೊಠಡಿಯಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ ಕೊನೆಯ ವಾರದಲ್ಲಿ ಮಲ್ಲಪುರಂನಿಂದ ಮನೆಗೆ ಬಂದಿದ್ದ ಮಹಿಳೆ ಹೋಮ್ ಕ್ವಾರಂಟೈನ್ ನಲ್ಲಿದ್ದರು. ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಬಿಡುಗಡೆ ಪ್ರಮಾಣ ಪತ್ರ ಪಡೆಯಲು ಆ ಮಹಿಳೆಗೆ ಪ್ರದೀಪ್ ಫೆÇೀನ್ ನಂಬರ್ ಕೊಟ್ಟಿದ್ದನು. ಗುರುವಾರ ಮಹಿಳೆಯನ್ನು ತನ್ನ ಮನೆಗೆ ಕರೆದು ಅತ್ಯಾಚಾರ ನಡೆಸಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆಂದು ದೂರಲಾಗಿದೆ. ಬಳಿಕ ಆಕೆ ಸ್ನೇಹಿತೆಗೆ ವಿಚಾರ ತಿಳಿಸಿದ್ದು ಈ ವೇಳೆ ದೂರು ನೀಡಲು ಆಕೆಯ ಸ್ನೇಹಿತೆ ಒತ್ತಾಯಿಸಿರುವುದಾಗಿ ಪೆÇಲೀಸರು ಹೇಳಿದ್ದಾರೆ.
ಆರೋಪಿ ಪ್ರದೀಪ್ ತಪೆÇ್ಪಪ್ಪಿಕೊಂಡಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲದ ಮುಂದೆ ಹಾಜರುಪಡಿಸಲಾಗುವುದು ಎಂದು ಪೆÇಲೀಸರು ತಿಳಿಸಿದ್ದಾರೆ.