ಕಾಸರಗೋಡು: 8100 ಕೋಟಿ ರೂ. ವೆಚ್ಚದಲ್ಲಿ ಜನಸಾಮಾನ್ಯರಿಗೆ ಮನೆ ಒದಗಿಸುವ ಯೋಜನೆ ದೇಶದಲ್ಲೇ ಪ್ರಥಮ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ನಿನ್ನೆ ಚೆಮ್ನಾಡಿನಲ್ಲಿ ನಡೆದ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರ್ಹತೆಯ ಹಿನ್ನೆಲೆಯಲ್ಲಿ ಮಾತ್ರ ಫಲಾನುಭವಿಗಳ ಆಯ್ಕೆ ನಡೆಯುವ ಲೈಫ್ ಮಿಷನ್ ಯೋಜನೆ ಸುಧಾರಿತ ರೀತಿ ಜಾರಿಗೊಳ್ಳುತ್ತಿದೆ ಎಂದು ತಿಳಿಸಿದರು.
ಚೆಮ್ನಾಡ್ ಗ್ರಾಮ ಪಂಚಾಯತ್ ನ ಕುಟುಂಬಶ್ರೀ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಶಿಲಾಫಲಕ ಅನಾವರಣಗೊಳಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿ.ಎಚ್.ಮಹಮ್ಮದ್ ಕುಂuಟಿಜeಜಿiಟಿeಜ ಚಾಯಿಂಡಡಿ, ಚೆಮ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಖಾದರ್ ಕಲ್ಲಟ್ರ, ಲೈಫ್ ಮಿಷನ್ ಜಿಲ್ಲಾ ಸಮಿತಿ ಸಂಚಾಲಕ ಎಂ.ವತ್ಸನ್, ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲೆಯ ಪೈಲೆಟ್ ಯೋಜನೆಯ ನಿರ್ಮಾಣದ ಉದ್ಘಾಟನೆ ಮೂಲಕ ಮಗದೊಂದು ಯಶೋಗಾಥೆಗೆ ಬರೆಯಲಾಗುತ್ತಿದೆ ಮುನ್ನಡಿ:
ಜಾಗವೂ, ಮನೆಯೂ ಇಲ್ಲದ ಮಂದಿಗೆ ಲೈಫ್ ಮಿಷನ್ ಯೋಜನೆಯ ಮೂಲಕ ವಸತಿ ಒದಗಿಸುವ ಕಾರ್ಯಕ್ರಮದ ಮೂರನೇ ಹಂತವಾಗಿ ಜಿಲ್ಲೆಯ ಪೈಲೆಟ್ ಯೋಜನೆಯ ನಿರ್ಮಾಣದ ಉದ್ಘಾಟನೆ ಮೂಲಕ ಮಗದೊಂದು ಯಶೋಗಾಥೆಗೆ ಮುನ್ನಡಿ ಬರೆಯಲಾಗುತ್ತಿದೆ.
ಚೆಮ್ನಾಡ್ ಗ್ರಾಮ ಪಂಚಾಯತ್ ನ ಒಂದು ಎಕ್ರೆ ಜಾಗದಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದೆ. 44 ಕುಟುಂಬಗಳು ಏಕಕಾಲಕ್ಕೆ ವಸತಿ ಹೂಡುವ ಸೌಲಭ್ಯಗಳೊಂದಿಗೆ ಮೊದಲ ಹಂತದ ನಿರ್ಮಾಣ ನಡೆಯಲಿದೆ. ಎಲ್.ಜಿ.ಎಸ್.ಎಫ್-ಪ್ರೀಫಾಬ್ ಎಂಬ ಅತ್ಯಧುನಿಕ ತಂತ್ರಜ್ಞಾನ ಬಳಸಿ 50 ಸೆಂಟ್ಸ್ ಜಾಗದಲ್ಲಿ 4 ಹಂತದ ಕಟ್ಟಡ ನಿರ್ಮಿಸಲಾಗುತ್ತಿದೆ. 26,84 ಚದರ ಅಡಿಯ ವಿಸ್ತೀರ್ಣದ ಸಮುಚ್ಚಯದಲ್ಲಿ ತಲಾ 511 ಚದರ ಅಡಿ ವ್ಯಕ್ತಿಗತ ಯೂನಿಟ್ ಗಳಿವೆ. ಎರಡು ಬೆಡ್ ರೂಂ ಗಳು, ಹಾಲ್, ಅಡುಗೆಮನೆ, ಶೌಚಾಲಯ ಸಹಿತ ಒಂದು ಯೂನಿಟ್ ಇರುವುದು. ಇದಲ್ಲದೆ ಅಂಗನವಾಡಿ, ಗ್ರಂಥಾಲಯ, ವೃದ್ಧರ ಶುಶ್ರೂಷೆ ಕೇಂದ್ರ, ಕಾಮನ್ ರೂಂ, ಸಿಂಕ್ ರೂಂ, ತ್ಯಾಜ್ಯ ಸಂಸ್ಕರಣೆ ಕೇಂದ್ರ, ಸೌರಶಕ್ತಿ ಸೌಲಭ್ಯ ಇತ್ಯಾದಿಗಳೂ ಇರುವುವು. ಇದರಲ್ಲಿ ಗ್ರೌಂಡ್ ಫೆÇ್ಲೀರ್ ನ ಎರಡು ಫ್ಲಾಟ್ ಗಳು ದೈಹಿಕ ವಿಶೇಷಚೇತನತೆ ಹೊಂದಿರುವವರಿಗಾಗಿ ವಿಶೇಷ ರೀತಿ ರಚಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿಯಿಂದ 1.5 ಕಿಮೀ ಅಂತರದಲ್ಲಿ ಚಟ್ಟಂಚಾಲ್-ದೇಳಿ ರಸ್ತೆಯ ಸಮೀಪ ಈ ಸಮುಚ್ಚಯ ನಿರ್ಮಾಣಗೊಳ್ಳಲಿದೆ. ಕಿಫ್ ಬಿ ಮೂಲಕ ಕೇರಳ ಜಲಪ್ರಾಧಿಕಾರ ಚೆಮ್ನಾಡ್ ಗ್ರಾಮ ಪಂಚಾಯತ್ ನ ವಿವಿಧ ಪ್ರದೇಶಗಳಿಗೆ ಒದಗಿಸಲಾದ ನೀರಿನ ಸರಬರಾಜು ಸೌಲಭ್ಯ ಮೂಲಕವೇ ಇಲ್ಲಿಗೂ ನೀರು ಪೂರೈಕೆ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು.
ಇದಕ್ಕೆ 6.64 ಕೋಟಿ ರೂ. ಯೋಜನೆ ನಿಧಿಯಾಗಿರುವುದು. ತ್ರಿಶೂರು ಡಿಸ್ಟ್ರಿಕ್ಟ್ ಲೇಬರ್ ಕಾಂಟ್ರಾಕ್ಟ್ ಸರ್ವೀಸ್ ಸೊಸೈಟಿಯ ಮೇಲ್ನೋಟದಲ್ಲಿ ಪೆನ್ನಾರ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ನಿರ್ಮಾಣ ಚಟುವಟಿಕೆ ನಡೆಸಲಿದೆ.
ಲೈಫ್ ಮಿಷನ್ ಯೋಜನೆ: ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಾಣಗೊಂಡದ್ದು 8162 ವಸತಿಗಳು
ಲೈಫ್ ಮಿಷನ್ ಯೋಜನೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ 8162 ವಸತಿಗಳು ನಿರ್ಮಾಣಗೊಂಡಿವೆ.
ಮೊದಲ ಹಂತದ ಅಂಗವಾಗಿ ಜಿಲ್ಲೆಯಲ್ಲಿ ಈ ವರೆಗೆ 2886 ಮನೆಗಳು, ಎರಡನೇ ಹಂತದಲ್ಲಿ ಈ ವರೆಗೆ 3026 ವಸತಿಗಳು ಫಲಾನುಭವಿಗಳಿಗೆ ಹಸ್ತಾಂತರಗೊಂಡಿವೆ. ಪಿ.ಎಂ.ಎ.ವೈ. ಗ್ರಾಮೀಣ ವಿಭಾಗದಲ್ಲಿ 568, ಪಿ.ಎಂ.ಎ.ವೈ. ಅರ್ಬನ್ ವಿಭಾಗದಲ್ಲಿ 1165, ಪರಿಶಿಷ್ಟ ಜಾತಿ ವಿಭಾಗದಲ್ಲಿ 399, ಪರಿಶಿಷ್ಟ ಪಂಗಡ ವಿಭಾಗದಲ್ಲಿ 16, ಮೀನುಗಾರಿಕೆ ವಿಭಾಗದಲ್ಲಿ 70 ಮನೆಗಳು ಪೂರ್ಣಗೊಂಡಿವೆ.
ಮೂರನೇ ಹಂತದ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಈಗ 627 ಮಂದಿ ಅರ್ಹರ ಪಟ್ಟಿಯಲ್ಲಿದ್ದಾರೆ.