HEALTH TIPS

ರಾಜ್ಯದ ಮೊದಲ ಟಾಟಾ ಕೋವಿಡ್ ಆಸ್ಪತ್ರೆ ಉದ್ಘಾಟನೆ: ಖಾಸಗಿ ಸಹಭಾಗಿತ್ವ ಫಲದಾಯಕವಾಗಿರುವುದಕ್ಕೆ ಮಾದರಿ : ಕೋವಿಡ್ ಮಹಾಮಾರಿಯ ಅವಧಿಯಲ್ಲಿ ನಾಡಿನ ಅಗತ್ಯ ಅರಿತು ಚಿಕಿತ್ಸಾ ಸೌಲಭ್ಯ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

  

           ಕಾಸರಗೋಡು: ಟಾಟಾ ಕೊರೋನಾ ಆಸ್ಪತ್ರೆ ಖಾಸಗಿ ಸಹಭಾಗಿತ್ವ ಫಲದಾಯಕವಾಗಿರುವುದಕ್ಕೆ ಮಾದರಿಯಾಗಿದೆ. ಇಲ್ಲಿ ಕೋವಿಡ್ ಮಹಾಮಾರಿಯ ಅವಧಿಯಲ್ಲಿ ನಾಡಿನ ಅಗತ್ಯ ಅರಿತು ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.  

     ಚೆಮ್ನಾಡ್ ಗ್ರಾಮ ಪಂಚಾಯತ್ ನ ಚಟ್ಟಂಚಾಲ್ ನಲ್ಲಿ ಟಾಟಾ ಸಮೂಹ ಸಂಸ್ಥೆ ನಿರ್ಮಿಸಿರುವ ಕೊರೋನಾ ಆಸ್ಪತ್ರೆಯ ಹಸ್ತಾಂತರ ಪ್ರಕ್ರಿಯೆಯನ್ನುಲಿಂದು ವೀಡಿಯೋ ಕಾನ್ ಫೆರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

      ಆರಂಭದ ಹಂತದಲ್ಲೇ ಅತ್ಯಧಿಕ ಕೋವಿಡ್ ರೋಗಿಗಳು ವರದಿಯಾದ ಜಿಲ್ಲೆ ಕಾಸರಗೋಡು ಆಗಿದೆ. ಕೋವಿಡ್ ಮಹಾಮಾರಿಯ ಪ್ರತಿ ಅವಧಿಯಲ್ಲೂ ಜಿಲ್ಲೆ ಅತೀವ ಜಾಗರೂಕತೆಯೊಂದಿಗೆ ಒಂದೊಂದು ಪ್ರತಿರೋಧ ಹೆಜ್ಜೆಗಳನ್ನು ಇರಿಸುತ್ತಲೇ ಬಂದಿದೆ. ಆರಂಭದ ಅವಧಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಫಲದಾಯ ಚಿಕಿತ್ಸೆ ಒದಗಿಸುವ ಮೂಲಕ ಮಾದರಿಯಾಗಿದೆ. ಜೊತೆಗೆ 4 ದಿನಗಳಲ್ಲಿ ಯುದ್ಧಕಾಲದ ಹಿನ್ನೆಲೆಯಲ್ಲಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಆಡಳಿತೆ ಬ್ಲೋಕ್ ಅತ್ಯಾಧುನಿಕ ಸೌಲಭ್ಯಗಳೊಂದಿಗೆ 200 ಮಂದಿಗೆ ದಾಖಲಾತಿ ಸೌಲಭ್ಯಗಳಿರುವ ಕೋವಿಡ್ ಆಸ್ಪತ್ರೆಯಾಗಿ ಸಿದ್ಧಗೊಂಡಿತ್ತು. ಈ ಆಸ್ಪತ್ರೆಗಾಗಿ 273 ಹುದ್ದೆಗಳಿಗೆ ನೇಮಕಾತಿ ಕ್ರಮ ಆರಂಭಗೊಂಡಿದೆ. ಸೋಂಕಿನ ಉಲ್ಬಣಾವಸ್ಥೆಯಲ್ಲಿ ಟಾಟಾ ಸಮೂಹ ಸಂಸ್ಥೆ , ಟಾಟಾ ಟ್ರಸ್ಟ್ ಜೊತೆಗೆ ಕೈಹೋಡಿಸಿ ಆಸ್ಪತ್ರೆ ನಿರ್ಮಿಸಿ ಒದಗಿಸಿದೆ. ಕಾಸರಗೋಡಿನ ವಿಶೇಷ ಪರಿಸ್ಥಿತಿಯನ್ನು ಗಮನಿಸಿ ಇಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಅನುಮತಿ ನೀಡಿದೆ. ವಾರಗಳ ಅವಧಿಯಲ್ಲೇ 5 ಎಕ್ರೆ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕೆ ಒದಗಿಸಿದೆ. ಸೂಖ್ತ ಅವಧಿಯಲ್ಲೇ ಆಸ್ಪತ್ರೆಯೂ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ ಎಂದರು. 

                   ಟಾಟಾಗೆ ಕೇರಳದ ಕೃತಜ್ಞತೆ: 

   ಕೇರಳೀಯ ಜನತೆಯ ಬಗ್ಗೆ ಸಹಾಯ ಒದಗಿಸಲು ಗಮನನೀಡಿರುವ ಟಾಟಾ ಸಮೂಹ ಸಂಸ್ತೆಗೆ ರಾಜ್ಯ ಸರಕಾರ ಕೃತಜ್ಞವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ವ್ಯಾಪಾರ ಚಿಂತನೆಗಳೊಂದಿಗೆ ವ್ಯವಹರಿಸುವ ಟಾಟಾ ಸಮೂಹ ಸಂಸ್ಥೆ ಜಗತ್ತಿನಲ್ಲಿ ಪ್ರಥಮ ಬಾರಿಗೆ ಕಾರ್ಪರೇಟ್ ಸೋಷ್ಯಲ್ ರೆಸ್ಪಾಸಿಬಿಲಿಟಿ (ಸಿ.ಎಸ್.ಆರ್.) ಚಟುವಟಿಕೆಗಳನ್ನು ಆರಂಭಿಸಿ ಮಾದರಿಯಾಗಿದೆ. ಜಗತ್ತು ತದನಂತರ ಈ ಸಂಸ್ಥೆಯನ್ನು ಅನುಸರಿಸುವುದಕ್ಕೆ ತೊಡಗಿತ್ತು. 60 ಕೋಟಿ ರೂ. ವೆಚ್ಚದಲ್ಲಿ ಟಾಟಾ ಆಸ್ಪತ್ರೆ ಇಲ್ಲಿ ನಿರ್ಮಿಸಲಾಗಿದೆ. ಅತ್ಯುತ್ತಮ ಚಿಕಿತ್ಸೆ ದೊರೆಯದೇ ಇದ್ದ ಕಾಸರಗೋಡು ಜಿಲ್ಲೆಗೆ ಮತ್ತು ಕೇರಳದ ಆರೋಗ್ಯ ವಲಯಕ್ಕೆ ಇದೊಂದು ಮಹತ್ವದ ಕೊಡುಗೆಯಾಗಿದೆ ಎಂದು ನುಡಿದರು.

        ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮುಖ್ಯ ಅತಿಥಿಯಾಗಿದ್ದರು. ಟಾಟಾ ಯೋಜನೆ ನಿಗಮದ ಡಿ.ಜಿ.ಎಂ.ಗೋಪಿನಾಥ್ ರೆಡ್ಡಿ ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಆಸ್ಪತ್ರೆಯ ಕೀಲಿಕೈ ಹಸ್ತಾಂತರಿಸಿದರು. 

     ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು,. ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ಬ್ಲೋಖ್ ಪಂಚಾಯತ್ ಅಧ್ಯಕ್ಷ ಸಿ.ಎಚ್.ಮಹಮ್ಮದ್ ಕುಂuಟಿಜeಜಿiಟಿeಜ ಚಾಯಿಂಡಡಿ, ಚೆಮ್ನಾಡ್ ಗ್ರಾಮ ಪಂಚಾಯತ್ ಕಲ್ಲಟ್ರ ಅಬ್ದುಲ್ ಖಾದರ್, ನಗರಸಭೆ ಅಧ್ಯಕ್ಷರ ಛೇಂಬರ್ ಛೇರ್ ಮೇನ್ ಆಗಿರುವ ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಗ್ರಾಮ ಪಂಚಾಯತ್ ಅಧ್ಯಕ್ಷರ ಅಸೋಸಿಯೇಶನ್ ಜಿಲ್ಲಾ ಸಮಿತಿ ಅಧ್ಯಕ್ಷ ಎ.ಎ.ಜಲೀಲ್, ಜಿಲ್ಲಾ ಪಂಚಾಯತ್ ಸದಸಗಯೆ ಸುಫೈಜಾ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು. ಆಸ್ಪತ್ರೆ ನಿರ್ಮಾಣಕ್ಕೆ ಸಹಕರಿಸಿದ ಸಂಘನಾ ಪ್ರತಿನಿಧಿಗಳಿಗೆ ಅಭಿನಂದನೆ ನಡೆಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries