ತಿರುವನಂತಪುರ: ಕೇರಳದಲ್ಲಿ ಹೆಚ್ಚು ಪ್ರಮಾಣದ ವೇಗತೆಯಿರುವ ವಿಶೇಷ ರೀತಿಯ ಕೋವಿಡ್ ವೈರಸ್ ಪ್ರಬೇಧದಿಂದ ಮುಂದಿನ ದಿನಗಳಲಿ ಅತೀ ಹೆಚ್ಚಿನ ಪ್ರಮಾಣದ ಸೋಂಕು ಬಾಧೆ ಉಂಟಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ಥಳೀಯವಾದ ರೂಪ ಮಾರ್ಪಾಡುಗೊಂಡ ವೈರಸ್‍ಗಳು ಹೆಚ್ಚಳಗೊಂಡಿರುವುದಾಗಿ ವೈದ್ಯಕೀಯ ತಜ್ಞರ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ, ಇದು ಸೋಂಕು ಇನ್ನಷ್ಟು ಹರಡಲು ಕಾರಣವಾಗಬಹುದೆಂದು ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ಕೋವಿಡ್ ತರಂಗ ಹೆಚ್ಚು ತೀವ್ರವಾಗಿರುತ್ತದೆ ಎಂದು ವರದಿಯಾಗಿದೆ. ಸಣ್ಣದೊಂದು ಅಜಾಗರೂಕತೆ ಕೂಡ ಭಾರಿ ಅಪಾಯಗಳಿಗೆ ಕಾರಣವಾಗುವುದು ಎಂದು ಮುಖ್ಯಮಂತ್ರಿ ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವರು.