ಬದಿಯಡ್ಕ: ಬ್ರಹ್ಮೈಕ್ಯರಾದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಪ್ರಥಮ ಆರಾಧನಾ ಉತ್ಸವ ಬುಧವಾರದಂದು ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಬುಧವಾರ ಬೆಳಿಗ್ಗೆ ಆರಾಧನೆ, ಯತಿಪೂಜೆ, ಮಧ್ಯಾಹ್ನ ಮಂತ್ರಾಕ್ಷತೆಗಳು ನಡೆಯಿತು.
ಅಪರಾಹ್ನ ಉಭಯ ತಿಟ್ಟು ಭಾಗವತ ನಾರಾಯಣ ಶಬರಾಯ ಅವರಿಂದ ಗಾನಾರ್ಚನೆ ನಡೆಯಿತು. ಹಿಮ್ಮೇಳದಲ್ಲಿ ಶ್ರೀನಿವಾಸ(ಗುಂಡ),ಲಕ್ಷ್ಮೀಶ ಅಮ್ಮಣ್ಣಾಯ, ಸುನಿಲ್ ಭಂಡಾರಿ ಕಡತೋಕ, ಶಿವಾನಂದ ಕೋಟ, ಧನಶ್ರೀ ಶಬರಾಯ(ವಯೊಲಿನ್)ನಲ್ಲಿ ಸಹಕರಿಸಿದರು.
ಬಳಿಕ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಸೇವೆ ನಡೆಯಯಿತು. ಪದ್ಯಾಣ ಗಣಪತಿ ಭಟ್,ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ, ಹೊಸಮೂಲೆ ಗಣೇಶ್ ಭಟ್, ರಮೇಶ್ ಭಟ್ ಪುತ್ತೂರು ಭಾಗವತಿಕೆಯಲ್ಲಿ, ಪದ್ಯಾಣ ಶಂಕರನಾರಾಯಣ ಭಟ್,ಲಕ್ಷ್ಮೀಶ ಅಮ್ಮಣ್ಣಾಯ, ಚೈತನ್ಯಕೃಷ್ಣ ಪದ್ಯಾಣ, ಲವಕುಮಾರ ಐಲ, ಲಕ್ಷ್ಮಣ ಮರಕಡ, ಕಿರಣ ಕುದ್ರೆಕ್ಕೋಡ್ಳು ಮೊದಲಾದವರು ಹಿಮ್ಮೇಳದಲ್ಲಿ ಸಹಕರಿಸಿದರು. ಅರ್ಥಧಾರಿಗಳಾಗಿ ಪೂಕಳ ಲಕ್ಷ್ಮೀನಾರಾಯಣ ಭಟ್, ಕುಂಬಳೆ ಶ್ರೀಧರ ರಾವ್, ರಾಧಾಕೃಷ್ಣ ಕಲ್ಚಾರ್, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ವಿದ್ವಾನ್.ವಿ.ಬಿ.ಹಿರಣ್ಯ, ಹರೀಶ ಬಳಂತಿಮೊಗರು, ವೇಣುಗೋಪಾಲ ಶೇಣಿ, ರವಿರಾಜ ಪನೆಯಾಲ ಮೊದಲಾದವರು ಸಹಕರಿಸಿದರು.