ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯ ಇಚ್ಲಂಪಾಡಿ ಕೊಡ್ಯಮೆ ಇರ್ನಿರಾಯರ ಮನೆತನದ ಹಡಿಲುಬಿದ್ದ ಸುಮಾರು 16 ಎಕರೆ ಗದ್ದೆಯಲ್ಲಿ ಊರಿನ ಉತ್ಸಾಹಿ ಕೃಷಿಕರ ತಂಡದ ನೇತೃತ್ವದಲ್ಲಿ ಮತ್ತೆ ಭತ್ತದ ಕೃಷಿಗೆ ಚಾಲನೆ ನೀಡಲಾಗಿದೆ.
ಇದರ ಅಂಗವಾಗಿ ನಾಟಿ ಉತ್ಸವವು ಸೆ. 3 ರಂದು ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಪಂಚಾಯತಿ ಜನಪ್ರತಿನಿಧಿಗಳ, ಕೃಷಿ ಇಲಾಖೆಯ ಮತ್ತು ಊರಿನ ಮಹನೀಯರ ಸಮ್ಮುಖದಲ್ಲಿ ನಡೆದಿತ್ತು. ಈ ಸಂದರ್ಭ ಕಳೆದ ಹಲವಾರು ದಿನಗಳಿಂದ ಯುವಕರೊಂದಿಗೆ ಭತ್ತದ ಕೃಷಿಯಲ್ಲಿ ನೇಜಿ ನೆಡುವ ಕೆಲಸದಲ್ಲಿ ಪಾಲ್ಗೊಂಡಿದ್ದ ಅತೀ ಹಿರಿಯ ವಯೋಮಾನದ, 80 ರ ಹರೆಯದ ಪೆÇಡಿ ಮತ್ತು ಅತೀ ಕಿರಿಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಕು. ಸುಶ್ಮಿತಾ ಇವರಿಗೆ ಸ್ಮರಣಿಕೆ ನೀಡಿ ಸಂಘಧ್ವನಿ ಮುಳಿಯಡ್ಕ ತಂಡದ ಕಾರ್ಯಕರ್ತರು ಗೌರವಿಸಿದರು. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯ ಮಹಿಳೆಯರು, ಸಂಘಧ್ವನಿ ತಂಡದ ಸದಸ್ಯರು ಉಪಸ್ಥಿತರಿದ್ದರು.