ಮುಳ್ಳೇರಿಯ: ಕೋವಿಡ್ ಹಿನ್ನೆಲೆಯಲ್ಲಿ ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆನ್‍ಲೈನ್ ಓಣಂ ಆಚರಣೆ - ಕುಂಞÉೂೀಣಂ ಆಯೋಜಿಸಲಾಯಿತು.
ಪೂರ್ವ ಪ್ರಾಥಮಿಕದಿಂದ ಪ್ರೌಢ ಶಾಲೆಯ ವರೆಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳು ಆನ್‍ಲೈನ್ ಮೂಲಕ ಹೂವಿನ ರಂಗವಲ್ಲಿ(ಪೂಕಳಂ), ಓಣಂ ಹಾಡು, ಚಿತ್ರಕಲೆ, ಮಾವೇಲಿ, ಒಣಂ ಹಾಡು, ಪಡಕಳಿ ವಿಭಾಗಗಳಲ್ಲಿ ನಡೆದವು. ತರಗತಿಯ ಆಧಾರದ ಮೇಲೆ ಆಯ್ಕೆಯಾದವರಿಂದ ಶಾಲಾ ಮುಖ್ಯ ವಿಜೇತರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ಲೇಖಕ, ಕಾಸರಗೋಡು ಡಯಟ್ ಪ್ರಾಂಶುಪಾಲ ವಿನೋಯ್ ಥಾಮಸ್ ಮತ್ತು ಖ್ಯಾತ ಭಾಷಣಕಾರ ಮತ್ತು ಶಿಕ್ಷಕ ಡಾ. ಎಂ. ಬಾಲನ್ ಆನ್‍ಲೈನ್ ಶುಭಾಶಯನೆಗೈದರು.
ಪ್ರಭಾರ ಮುಖ್ಯೋಪಾಧ್ಯಾಯ ಪಿ.ಹಶೀಮ್, ಹಿರಿಯ ಸಹಾಯಕ ಕೆ.ಅಶೋಕನ್, ಕೆ.ಪುಷ್ಪರಾಜನ್, ಪಿ.ಕೆ.ಜಯರಾಜನ್, ಸಿ.ಪ್ರಶಾಂತ್, ಟಿ.ಶ್ರೀಜಾ, ಫೆಮಿನಾ ಮತ್ತು ಪ್ರಸನ್ನ ಕುಮಾರಿ ಮಾತನಾಡಿದರು.