ಕೋಟ್ಟಯಂ: ಇದನ್ನು ನೀವೇನು ಅನ್ನುತ್ತೀರಿ ಎನ್ನುವುದು ನಿಮಗೆ ಬಿಟ್ಟದ್ದು. ಆದರೆ ಹೀಗೊಂದು ನಡೆದಿರುವುದು ಸತ್ಯ. ರಾಷ್ಟ್ರಾದ್ಯಂತ ಕರೋನಾ ಮಹಾಮಾರಿ ಸದ್ದು ಮಾಡುತ್ತಿದ್ದರೆ, ಕೊಟ್ಟಾಯಂ ಜಿಲ್ಲೆಯ ಚುಂಗತ್ತ್ ಎಂಬಲ್ಲಿ ವಾಸವಾಗಿರುವ ಮಹಿಳೆ ಈ ಹೆಸರಿಂದ ಭಾರೀ ವೈರಲ್ ಆಗಿದ್ದಾರೆ.
ಚುಂಗತ್ತ್ ನಿವಾಸಿ ಕರೋನಾ ಎಂಬ ನಾಮದೇಯದ ಗೃಹಿಣಿ ಇದೀಗ ವೈರಲ್ ಆಗಿರುವವರು. ಇಬ್ಬರು ಮಕ್ಕಳ ತಾಯಿಯಾದ ಈ ಗೃಹಿಣಿಯ ನಿಜವಾದ ಹೆಸರೇ ಕರೊನಾ(ಕೊರೊನಾ)ಇವರಿಗೀಗ 34 ರ ಹರೆಯ. ಅಂದರೆ 34 ವರ್ಷಗಳ ಹಿಂದೆಯೇ ಈಕೆಯ ಪೆÇೀಷಕರು ಈ ವಿಭಿನ್ನ ಹೆಸರನ್ನು ನೀಡಿದ್ದರು. ಅವರು ಹೆಸರು ಇರಿಸಲು ಚರ್ಚ್‍ಗೆ ಹೋದಾಗ ತಮ್ಮ ಪುತ್ರಿಗೆ ಯಾವ ಹೆಸರು ಇರಿಸಬೇಕೆಮದು ಹೆತ್ತವರು ನಿರ್ಧರಿಸಿರಲಿಲ್ಲ. ಹೀಗೆ ಅಂದಿನ ಧರ್ಮಗುರು ಜೇಮ್ಸ್ ಶಿಶುವಿಗೆ ಕರೋನಾ ಎಂದು ಹೆಸರಿಟ್ಟರು. ಬಳಿಕ ಶಾಲಾ ದಾಖಲೆಗಳಲ್ಲಿ ತನ್ನ ಹೆಸರು ಕರೋನಾ ಎಂಬುದು 'ಕೊರೊನಾ' ಎಂದು ತಪ್ಪಾಗಿ ಬರೆದಿದ್ದಾರೆ. ಚರ್ಚಿನ ಧರ್ಮಗುರುವಲ್ಲಿ ಹೆತ್ತವರು ಹೆಸರಿನ ಅರ್ಥ ಕೇಳಿದ್ದರಂತೆ ಆಗವರು ಹೆಸರಿನ ಅರ್ಥ "ಕಿರೀಟ" ಎಂದು ಹೇಳಿದರು.
ಆಲಪ್ಪುಳ ತುಮುಕುಳಂನ ಚೂಲಂ ಸ್ಟ್ರೀಟ್ ಗ್ರಾಮದಲ್ಲಿರುವ ಸೇಂಟ್ ಸೆಬಾಸ್ಟಿಯನ್ ಚರ್ಚ್‍ನಲ್ಲಿ ನಾಮಕರಣ ನಡೆದಿತ್ತಂತೆ. ಕರೋನಾ ಹೆಸರನ್ನು ಚುನಾವಣಾ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‍ನಲ್ಲಿ ಬರೆಯಲಾಗಿದೆ. ಕರೋನಾ ವೈರಸ್ ಪ್ರಪಂಚದಾದ್ಯಂತ ಹರಡುವುದರೊಂದಿಗೆ ತನ್ನ ಜೀವನ ಬದಲಾಗಿದೆ ಎಂದು ಕರೋನಾ ಹೇಳುತ್ತಾರೆ. ಅಪರಿಚಿತರಲ್ಲಿ ತನ್ನ ಹೆಸರನ್ನು ಹೇಳಿದಾಗ ತಾವೊಂದು ಅದ್ಬುತವನ್ನು ನೋಡುತ್ತಿರುವಂತೆ ಭಾವ ಬದಲಾಯಿಸುತ್ತಾರೆ. ಇದು ತಮಾಷೆಯೆ ಎಂದು ಕೆಲವರು ಕೇಳಿದವರೂ ಇದ್ದಾರೆಂದು ಕರೊನಾ ಅಕ್ಕ ಹೇಳಿರುವರು.
ಕರೋನಾ ರಕ್ತದಾನಿ:
"ನಾನು ಇತ್ತೀಚೆಗೆ ವೈದ್ಯಕೀಯ ಕಾಲೇಜೊಂದರಲ್ಲಿ ರಕ್ತದಾನ ಮಾಡಲು ಹೋದಾಗ, ಅಧಿಕಾರಿಗಳು ಕರೋನಾವನ್ನು ಹೆಸರಿನ ಅಂಕಣದಲ್ಲಿ ಏಕೆ ಬರೆಯಲಾಗಿದೆ ಎಂದು ಕೇಳಿದರು. ಏನೋ ತಪ್ಪಾಗಿದೆ ಎಂದು ಅವರು ಭಾವಿಸಿದ್ದರು. ನಾನು ಇನ್ನೊಂದು ಬಾರಿ ನನ್ನ ತಾಯಿಯೊಂದಿಗೆ ಆಸ್ಪತ್ರೆಗೆ ಹೋದಾಗಲೂ ಅದೇ ಅನುಭವವಾಯಿತು" ಎಂದು ಗೃಹಿಣಿ ಅನುಭವ ಹಂಚಿಕೊಂಡಿರುವರು. ಇವರ ಇಬ್ಬರು ಮಕ್ಕಳೂ ಪ್ರಸ್ತುತ ಮೂರು ಮತ್ತು ಐದನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.
ಈಗ ಆನ್‍ಲೈನ್ ತರಗತಿಗಳ ಶಿಕ್ಷಣ. ನೋಂದಾಯಿಸಲು ಹೋದ ಮಕ್ಕಳು ತಮ್ಮ ತಾಯಿಯ ಹೆಸರಿರುವಲ್ಲಿ ಕರೋನಾ ಎಮದು ಬರೆದಿದ್ದರು. ಕೊನೆಗೆ ಶಿಕ್ಷಕ ನೇರವಾಗಿ ಕರೆ ಮಾಡಿ ಹೆಸರು ಸರಿಯಾಗಿದೆಯೇ ಎಂದು ವಿಚಾರಿಸಿದರು ಎನ್ನುತ್ತಾರೆ ವೈರಸ್ ತಾಯಿ(!). "ಕೆಲವರು ನನ್ನನ್ನು ಗೋ ಕರೋನಾ, ಗೋ ಕರೋನಾ ಎಂದು ಕರೆದು ಗೇಲಿ ಮಾಡುತ್ತಾರೆ. ನನ್ನ ಮಕ್ಕಳು ನನ್ನನ್ನು ವೈರಸ್ ತಾಯಿ ಮತ್ತು ಕೊರೊನಮ್ಮ ಎಂದು ಕರೆಯುತ್ತಾರೆ. ಅವರ ಬಗ್ಗೆ ನನಗೆ ಯಾವುದೇ ಬೇಸರಗಳಿಲ್ಲ" ಎಂದು ಅವರು ಹೇಳಿರುವರು. ಇವರ ಪತಿ, ಮೀನುಗಾರರಾದ ಥಾಮಸ್ ಹೇಳುವಂತೆ ನಿಜವಾದ ಕರೋನಾಗೆ ಹೆದರಿ ಬದುಕು ಸಾಗಿಸುತ್ತಿರುವ ನಾನು ಇದೀಗ ದೇಶವ್ಯಾಪಿಯಾಗಿರುವ ಕಳಪೆ ಕರೋನಾಗೆ ಹೆದರುವುದಿಲ್ಲ ಎಂದು ನಸುನಗುತ್ತಾರೆ.