HEALTH TIPS

ಪೆರ್ಲದ ಯಕ್ಷಗಾನ ಕೇಂದ್ರದಲ್ಲಿ ತೆಂಕಬೈಲು ಶ್ರದ್ದಾಂಜಲಿ ಸಭೆ

       ಪೆರ್ಲ: ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಹಿಮ್ಮೇಳ ಗುರುಗಳಾಗಿದ್ದು ಅಸೌಖ್ಯದಿಂದ ಭಾನುವಾರ ನಿಧನರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರೀಯವರಿಗೆ ಯಕ್ಷಗಾನ ಕೇಂದ್ರದಲ್ಲಿ ನಾಟ್ಯಗುರು ಸಬ್ಬಣಕೋಡಿ ರಾಮಭಟ್ ನೇತೃತ್ವದಲ್ಲಿ ಮತ್ತು ತೆಂಕಬೈಲು ಶಿಷ್ಯರಾದ ಉದಯ ಕಂಬಾರು ಇವರ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ಸೋಮವಾರ ನಡೆಯಿತು.

       ನಾಟ್ಯಗುರು ಸಬ್ಬಣಕೋಡಿ ರಾಮಭಟ್ ಈ ಸಂದರ್ಭ ಮಾತನಾಡಿ ತೆಂಕಬೈಲು ಭಾಗವತರು ಈ ಕೇಂದ್ರದಲ್ಲಿ ಗುರುಗಳಾಗಿ ಅಪಾರ ಶಿಷ್ಯರನ್ನು ಕೊಡುಗೆಯಾಗಿ ನೀಡಿ ನಮ್ಮನ್ನಗಲಿ ದೇವರ ಪಾದವನ್ನು ಸೇರಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ನಮಗೆಲ್ಲರಿಗೂ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ನಮ್ಮೆಲ್ಲರ ನಮನಗಳು ಎಂದು ನುಡಿದರು.

    ಸಭೆಯ ಅಧ್ಯಕ್ಷತೆ ವಹಿಸಿದ್ದ ಹವ್ಯಾಸಿ ಹಿಮ್ಮೇಳ ಕಲಾವಿದ, ಛಾಯಾಗ್ರಾಹಕ ಉದಯ ಕಂಬಾರು ಮಾತನಾಡಿ ತೆಂಕಬೈಲು ಭಾಗವತರು ಮಾನ್ಯದಲ್ಲಿ ತರಬೇತಿ ನೀಡುತ್ತಿದ್ದಾಗ ಅಲ್ಲಿ ನಾನು ಕಲಿತವ. ಬಹಳ ಸರಳ ವಿಧಾನದಲ್ಲಿ ಹಿಮ್ಮೇಳ ಪಾಠವನ್ನು ಕಲಿಸುವ ನೈಪುಣ್ಯತೆ ಅವರದು. ಚೆಂಡೆ ಮದ್ದಳೆ, ಭಾಗವತಿಕೆ ಮೂರನ್ನೂ ಕಲಿಸುವ ಸಮರ್ಥ ಶ್ರೇಷ್ಟ ಗುರು. ರಂಗದಲ್ಲಿ ಅವರ ಹಾಡುಗಾರಿಕೆಯಲ್ಲಿ ಅದ್ಬುತವಾದ ರಾಗದ ಮೂಲಕ ಜನಮನವನ್ನು ಗೆದ್ದಿದ್ದಾರೆ. ಅಂತಹ ಶ್ರೇಷ್ಠ ಗುರು ಭಾಗವತರನ್ನು ಕಳೆದುಕೊಂಡ ನಾವೆಲ್ಲರು ದುಃಖಿತರಾಗಿದ್ದೇವೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಪರಮಾತ್ಮ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ ಎಂದರು. 

       ಕೇಂದ್ರದ ಅವರ ಶಿಷ್ಯರು ತೆಂಕಬೈಲು ಭಾಗವತರು ಹೇಳಿಕೊಡುವ ಕ್ರಮದ ಬಗ್ಗೆ ಗುಣಗಾನ ಮಾಡಿದರು. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಡಾ ಯಸ್ ಯನ್ ಭಟ್ ಪೆರ್ಲ, ತಾರನಾಥ ರೈ ಪೆರ್ಲ, ಶ್ಯಾಮಸುಂದರ ನೆತ್ತರಕರೆ, ಹಾಗೂ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries