ಮಲಪ್ಪುರಂ: ಜುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದ ಆರೋಪಿ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ವಿರುದ್ಧ ಮುಸ್ಲಿಂ ಲೀಗ್ ಕ್ರಮ ಕೈಗೊಳ್ಳಲು ಕೊನೆಗೂ ಮುಂದೆ ಬಂದಿದೆ. ಲೀಗ್ ಪ್ರಮುಖ ನೇತಾರ ಪಾಣಕ್ಕಾಡ್ ಹೈದರಾಲಿ ಶಿಹಾಬ್ ನೇತೃತ್ವದ ಲೀಗ್ ಸಭೆಯಲ್ಲಿ ಹೂಡಿಕೆದಾರರ ಮಾಹಿತಿ ಮತ್ತು ಆಸ್ತಿಗಳ ಬಗ್ಗೆ ವಿವರವಾದ ವರದಿಯನ್ನು ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕು ಎಂದು ನಿರ್ಧರಿಸಿದೆ.
ಜುವೆಲ್ಲರಿ ವಂಚನೆಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳನ್ನು ಮುಂದಿನ ಆರು ತಿಂಗಳಲ್ಲಿ ಕೊನೆಗೊಳಿಸಬೇಕು. ಎಲ್ಲಾ ಹೂಡಿಕೆದಾರರ ಹಣವನ್ನು ಆರು ತಿಂಗಳೊಳಗೆ ಪಾವತಿಸಲು ಸೂಚನೆ ನೀಡಲಾಗಿದೆ ಎಂದು ಪಿ.ಕೆ.ಕುಂಞಲಿಕುಟ್ಟಿ ಹೇಳಿದರು. ಯುಡಿಎಫ್ ಜಿಲ್ಲಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲೂ ಸೂಚಿಸಲಾಗಿದೆ ಎಂದಿರುವರು.
ಹಣಕಾಸಿನ ವಂಚನೆಗೆ ಸಂಬಂಧಿಸಿದಂತೆ ಲೀಗ್‍ನ ಇತರ ನಾಯಕರು ಪಕ್ಷದಿಂದ ದೂರವಿರಲು ಒತ್ತಾಯಿಸುವಂತೆ ಲೀಗ್ ನಾಯಕತ್ವ ಪಕ್ಷದ ಘಟಕಕ್ಕೆ ನಿರ್ದೇಶನ ನೀಡಿದೆ. ಹೂಡಿಕೆದಾರರು ಮತ್ತು ಖಮರುದ್ದೀನ್ ಅವರ ಆಸ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರತಿನಿಧಿಯೋರ್ವನನ್ನು ನಿಯೋಜಿಸಲಾಗಿದೆ.
ಮುಂದಿನ 15 ದಿನಗಳೊಳಗೆ ಲೆಕ್ಕಾಚಾರಗಳ ಸ್ಪಷ್ಟ ವಿವರಗಳನ್ನು ನೀಡಲು ಸೂಚಿಸಲಾಗಿದೆ. ಎಲ್ಲರ ಸಾಲಗಳನ್ನು ಗರಿಷ್ಠ 6 ತಿಂಗಳೊಳಗೆ ಇತ್ಯರ್ಥಪಡಿಸಬೇಕು ಎಂದೂ ನೇತಾರರು ನಿರ್ದೇಶನ ನೀಡಿರುವರು. ಈ ವರ್ಷದ ಆರಂಭದಿಂದಲೂ ಜುವೆಲ್ಲರಿಯ ವಿರುದ್ಧದ ಆರೋಪಗಳು ಕೇಳಿಬಂದಿದ್ದವು. ಜುವೆಲ್ಲರಿಯ ನಿರ್ವಾಹಕರು ಶಾಸಕರ ಸೋಗಿನಲ್ಲಿ ಲಕ್ಷ ರೂಪಾಯಿಗಳನ್ನು ವಂಚಿಸಿರುವರು. ಹಣವನ್ನು ಹೂಡಿಕೆ ಮಾಡಿದವರಲ್ಲಿ ಬಹುತೇಕರು ಮುಸ್ಲಿಂ ಲೀಗ್ ನಾಯಕರು ಮತ್ತು ಲೀಗ್ ಫಲಾನುಭವಿಗಳೇ ಆಗಿದ್ದಾರೆ.
ಖಮರುದ್ದೀನ್ ವಿರುದ್ಧದ ಹೂಡಿಕೆ ವಂಚನೆ ಪ್ರಕರಣದ ಬಗ್ಗೆ ಅಪರಾಧ ವಿಭಾಗ ತನಿಖೆ ನಡೆಸಲಿದೆ ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಬುಧವಾರ ಹೇಳಿದ್ದಾರೆ. ಜಿಲ್ಲಾ ಅಪರಾಧ ವಿಭಾಗವು ಖಮರುದ್ದೀನ್ ವಿರುದ್ಧ ಇಂದು 14 ವಂಚನೆ ಪ್ರಕರಣಗಳನ್ನು ಕಾಸರಗೋಡು ಚಂದೇರಾ ಪೆÇಲೀಸ್ ಠಾಣೆಯಲ್ಲಿ ದಾಖಲಿಸಿದೆ. ಇದೀಗ ಶಾಸಕರ ವಿರುದ್ಧ ಒಟ್ಟು 29 ವರೆಗೆ ದೂರು ದಾಖಲಿಸಿದಂತಾಗಿದೆ.