ಲಂಡನ್: ಕೋವಿಡ್ -19 ರಕ್ಷಣಾ ಕಾರ್ಯಾಚರಣೆಯಲ್ಲಿ ವಿಶ್ವದಾದ್ಯಂತ ಗಮನ ಸೆಳೆದಿರುವ ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜ ಅವರಿಗೆ ಅಂತರರಾಷ್ಟ್ರೀಯ ಮನ್ನಣೆ ದೊರೆತಿದೆ. ಲಂಡನ್ ಮೂಲದ ಪ್ರಾಸ್ಪೆಕ್ಟ್ ನಿಯತಕಾಲಿಕ ನಡೆಸಿದ ಸಮೀಕ್ಷೆಯಲ್ಲಿ ಸಚಿವೆಯು ಪ್ರಥಮ ಸ್ಥಾನ ಪಡೆದರು. ಕೋವಿಡ್ ವಿರುದ್ಧ ಅತ್ಯುತ್ತಮ ಹೋರಾಟವನ್ನು ಮುನ್ನಡೆಸಿದ ಹಿನ್ನೆಲೆಯಲ್ಲಿ ಈ ಮನ್ನಣೆಯ ಪ್ರಾಪ್ತವಾಗಿದೆ.
ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಪ್ರಥಮ ಸ್ಥಾನ ಪಡೆದರೆ, ನ್ಯೂಜಿಲೆಂಡ್‍ನ ಪ್ರಧಾನಿ ಜಸಿಂತಾ ಅರ್ಡೆನ್ ನಂತರದ ಸ್ಥಾನದಲ್ಲಿದ್ದಾರೆ. ರಾಜ್ಯ ಆರೋಗ್ಯ ಸಚಿವರು ಕೋವಿಡ್ ಯುಗದ ಚಟುವಟಿಕೆ ಮತ್ತು ರಾಜ್ಯದಲ್ಲಿ ನಿಪಾ ವೈರಸ್ ಸಂದರ್ಭದಲ್ಲಿ ಸಚಿವೆಯ ಕಾರ್ಯಕ್ಷಮತೆ ಇಂತಹ ಮಾನ ಲಭಿಸುವಲ್ಲಿ ಪ್ರಧಾನ ಕಾರಣವಾಗಿದೆ.
ಸಮೀಕ್ಷೆಯಲ್ಲಿ ಕೆ.ಕೆ.ಶೈಲಜಾ ಅವರಿಗೆ ಗರಿಷ್ಠ 20,000 ಜನರು ಬೆಂಬಲ ನೀಡಿದ್ದರು. ಚೀನಾದ ವುಹಾನ್‍ನಲ್ಲಿ ಕೋವಿಡ್‍ನ ಮೊದಲ ದೃಢಪ್ರಕರಣದ ಬಳಿಕ , ಆರೋಗ್ಯ ಸಚಿವರು ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಕೇರಳದಲ್ಲಿ ಮೊತ್ತಮೊದಲು ಸೋಂಕು ಪ್ರತಿಬಂಧಕಗಳನ್ನು ಬಲಪಡಿಸಿದ್ದರು. ನಿಪ್ಪಾ ವೈರಸ್ ಜಟಿಲತೆಯ ಪರಿಸ್ಥಿತಿಯಲ್ಲೂ ಸಚಿವೆ ಇಂತಹದೇ ರೀತಿಯ ಕ್ರಮ ಕೈಗೊಂಡಿದ್ದರು ಎಂದು ಪ್ರಶಸ್ತಿ ನಿರ್ವಹಣಾ ಸಮಿತಿ ಗುರುತಿಸಿದೆ.
ಯುರೋಪಿನಲ್ಲಿ ಆಫ್ರಿಕನ್ ಮೂಲದ ಜನರ ಪರಿಸ್ಥಿತಿಯನ್ನು ವಿವರಿಸಿದ ಗುಲಾಮಗಿರಿಯ ಇತಿಹಾಸಕಾರನೆಂದು ಕರೆಯಲ್ಪಡುವ ಆಲಿವಿಯರ್ ಒಟ್ಟೆಲ್ ಮತ್ತು ಬಾಂಗ್ಲಾದೇಶದಲ್ಲಿ ಪ್ರವಾಹ-ನಿರೋಧಕ ಮನೆಗಳನ್ನು ನಿರ್ಮಿಸಿದ ಮರೀನಾ ತಪಸ್ವಂ ಮತ್ತು ವಿಶ್ವದ ಪ್ರತಿಯೊಬ್ಬರಿಗೂ ಕನಿಷ್ಠ ಆದಾಯವನ್ನು ಖಾತರಿಪಡಿಸುವ ಯುಬಿಐ ಚಳವಳಿಯ ಸ್ಥಾಪಕ ಫಿಲಪ್ ವಾನ್ ವರ್ಗೀಸ್ ಈ ಪಟ್ಟಿಯಲ್ಲಿರುವ ಇತರ ಗಮನಾರ್ಹ ವ್ಯಕ್ತಿಗಳಾಗಿದ್ದಾರೆ.
ಪ್ರಸ್ತುತರಾಜ್ಯದಲ್ಲಿ ಕೋವಿಡ್ ಸೋಂಕಿತರು ದಿನೇದಿನೇ ಹೆಚ್ಚಳಗೊಳ್ಳುತ್ತಿದ್ದು, ಸಂಪರ್ಕದ ಮೂಲಕ ಹೆಚ್ಚು ಮಂದಿಗೆ ಕೋವಿಡ್ ಬಾಧಿಸುತ್ತಿರುವುದು ಕಳವಳಕ್ಕೆ ಕಾರಣವಾಗುತ್ತಿದೆ.