ಸಮರಸ ಚಿತ್ರ ಸುದ್ದಿ: ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಇಡಿ ತನಿಖೆಗೆ ಒಳಗಾಗಿರುವ ರಾಜ್ಯ ಉನ್ನತ ಶಿಕ್ಷಣ ಸಚಿವ ಕೆ.ಟಿ ಜಲೀಲ್ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ನಡೆದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭ ಪೊಲೀಸರು ಬಳಸಿದ ಜಲಫಿರಂಗಿಯಿಂದ ಗಂಭೀರ ಅಸ್ವಸ್ಥಗೊಂಡ ಯುವಮೋರ್ಚಾ ಜಿಲ್ಲಾಸಮಿತಿ ಉಪಾಧ್ಯಕ್ಷೆ ಅಂಜು ಜೋಸ್ಟಿ ಅವರನ್ನು ಕಾರ್ಯಕರ್ತರು ಆಸ್ಪತ್ರೆಗೆ ಸಾಗಿಸಿದರು.