ಟಿಬೆಟ್: ಹಿಂದೂಗಳ ಪರಮ ಪವಿತ್ರ ತಾಣವಾಗಿರುವ ಕೈಲಾಸ ಮಾನಸಸರೋವರದ ಬೃಹತ್ ಭಾಗವನ್ನು ಚೀನಾದಿಂದ ಭಾರತೀಯ ಸೇನೆ ವಶಪಡಿಸಿಕೊಂಡಿದೆ.
ಭಾರತಕ್ಕೆ ಸೇರಿದ್ದ ಕೈಲಾಸ ಮಾನಸಸರೋವರದ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿತ್ತು. ಆ.29 ರಂದು ಚೀನಾದ ಅತಿಕ್ರಮಣಕ್ಕೆ ಪ್ರತಿಕ್ರಿಯೆ ನೀಡಿದ್ದ ವೇಳೆಯಲ್ಲಿ ಭಾರತೀಯ ಸೇನೆ ಕೈಲಾಸ ಮಾನಸಸರೋವರ ಪ್ರದೇಶವನ್ನು ವಶಕ್ಕೆ ಪಡೆದಿರುವುದನ್ನು ಎಬಿಪಿ ಲೈವ್ ಸುದ್ದಿ ಸಂಸ್ಥೆ ವಿಡಿಯೋ ಸಹಿತ ಪ್ರಕಟಿಸಿದೆ.
ಟಿಬೆಟ್ ನ ಭಾಗದಲ್ಲಿರುವ ಕೈಲಾಸ ಮಾನಸಸರೋವರ ಹಿಂದೂಗಳ ಪಾಲಿಗೆ ಪವಿತ್ರ ಕ್ಷೇತ್ರವಾಗಿದ್ದು ಶಿವ ಅಲ್ಲಿ ವಾಸಿಸುತ್ತಾನೆ ಎಂಬ ನಂಬಿಕೆ ಇದೆ ಅಷ್ಟೇ ಅಲ್ಲದೇ ಬಹುತೇಕ ಎಲ್ಲಾ ಪುರಾಣಗಳಲ್ಲಿಯೂ ಕೈಲಾಸ ಮಾನಸಸರೋವರದ ಉಲ್ಲೇಖ ಇದೆ ಅಲ್ಲಿಂದ ಚೀನಾ ಸೇನೆಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ.
ಟಿಬೆಟ್ ನ ಪ್ರದೇಶದಲ್ಲಿದ್ದರೂ ಕೈಲಾಸ ಮಾನಸಸರೋವರದ ಮೇಲೆ ಯಾರೂ ಸಹ ಹಕ್ಕು ಪ್ರತಿಪಾದಿಸಿರಲಿಲ್ಲ, ಆದರೂ ಭಾರತಕ್ಕೆ ಸಹಸ್ರಮಾನಗಳಿಂದಲೂ ಅಡೆತಡೆಯಿಲ್ಲದ ಮುಕ್ತ ಪ್ರವೇಶವಿತ್ತು. 1947 ರಲ್ಲಿ ಬ್ರಿಟೀಷರು ಭಾರತ ಬಿಟ್ಟು ಹೋದಾಗ ಭಾರತಕ್ಕೆ ಕೈಲಾಸ ಮಾನಸಸರೋವರವನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಅವಕಾಶವಿತ್ತು.