ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ ಡಿಒ) ಸೆ.23 ರಂದು ಲೇಸರ್ ಗೈಡೆಡ್, ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ನ್ನು ಕೆಕೆ ರೇಂಜ್ ನ ಆರ್ಮರ್ಡ್ ಕಾರ್ಪ್ಸ್ ಸೆಂಟರ್ ಮತ್ತು ಶಾಲೆ, ಅಹ್ಮದ್ ನಗರದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆದಿದೆ.
ಎಟಿಜಿಎಂ ಈ ಪರೀಕ್ಷೆಗಳಲ್ಲಿ ನಿಗಗಿತ ಗುರಿ 3 ಕಿ.ಮೀ ನ್ನು ಯಶಸ್ವಿಯಾಗಿ ತಲುಪಿದ್ದು, ರಕ್ಷಣಾ ಇಲಾಖೆಗೆ ಮತ್ತಷ್ಟು ಬಲ ಬಂದಂತಾಗಿದೆ. ಸ್ಫೋಟಕ ಪ್ರತಿಕ್ರಿಯಾತ್ಮಕ ಆರ್ಮರ್ ನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಎಟಿಜಿಎಂ ಹೊಂದಿದೆ ಎಂದು ಡಿಆರ್ ಡಿಒ ತಿಳಿಸಿದೆ
ಇದಕ್ಕೂ ಮುನ್ನ ಮಂಗಳವಾರದಂದು ಒಡಿಶಾದ ಬಾಲಸೋರ್ನಲ್ಲಿಂದು ಡಿಆರ್ ಡಿಒ ವೈಮಾನಿಕ ’ಅಭ್ಯಾಸ್’ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿತ್ತು.