HEALTH TIPS

ಎಡನೀರು ಶ್ರೀಗಳಿಗೆ ಯಕ್ಷಬಳಗ ನುಡಿನಮನ

 

      ಮಂಜೇಶ್ವರ: ಇತ್ತೀಚೆಗೆ ಬ್ರಹ್ಮೈಕ್ಯರಾದ ಎಡನೀರುಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳಿಗೆ ಯಕ್ಷಬಳಗ ಹೊಸಂಗಡಿ ಕಲಾ ಸಂಸ್ಥೆಯ ವತಿಯಿಂದ ನುಡಿನಮನ ಸಲ್ಲಿಸಲಾಯಿತು. 

       ಮೂಡಂಬೈಲಿನ ನಾರಾಯಣೀಯಂ ಮನೆಯಲ್ಲಿ ನಡೆದ ಸಮಾರಂಭದಲ್ಲಿ ವೇದಮೂರ್ತಿ ಬಾಲಕೃಷ್ಣ ಭಟ್ ದಡ್ಡಂಗಡಿ ದೀಪ ಪ್ರಜ್ವಲನಗೈದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ನುಡಿ ನಮನ ಸಲ್ಲಿಸಿದರು. ಸಭೆಯಲ್ಲಿ ಶಿವರಾಮ ಪದಕಣ್ಣಾಯ ಮೂಡಂಬೈಲು, ರಾಜಾರಾಮ ರಾವ್ ಮೀಯಪದವು, ಚೇತನರಾಮ ಪಜಿಂಗಾರು, ಪದ್ಮನಾಭ ಬಳ್ಳಕ್ಕುರಾಯ ಮತ್ತಿತರರು ಉಪಸ್ಥಿತರಿದ್ದು ಎಡನೀರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಮಾಡಿ ಅನುಭವಗಳನ್ನು ಹಂಚಿಕೊಂಡರು.

       ಕಾರ್ಯಕ್ರಮದಲ್ಲಿ ಸುರೇಶ ಪದಕಣ್ಣಾಯ, ಶಾರದಾ ಸುರೇಶ ಪದಕಣ್ಣಾಯ, ನಾಗಾಭರಣ ಭಾಗವಹಿಸಿದ್ದರು. ಯಕ್ಷಬಳಗ ಹೊಸಂಗಡಿ ಕಲಾ ತಂಡದ ಸಂಚಾಲಕ ಸತೀಶ ಅಡಪ ಸಂಕಬೈಲು ಸ್ವಾಗತಿಸಿ ಶ್ರೀಗಳು ಹಾಗೂ ಯಕ್ಷಬಳಗದ ಅವಿನಾಭಾವ ಸಂಬಂಧ ಹಾಗೂ ಕಲೆಗೆ ಅವರು ನೀಡಿದ ಪೆÇ್ರೀತ್ಸಾಹದ ಬಗ್ಗೆ ಅಭಿಮಾನದ ನುಡಿಗಳನ್ನಾಡಿದರು. ಕಾರ್ಯದರ್ಶಿ ನಾಗರಾಜ ಪದಕಣ್ಣಾಯ ಕಾರ್ಯಕ್ರಮ ನಿರೂಪಿಸಿ ಇತ್ತೀಚೆಗೆ ಶ್ರೀಮಠದಲ್ಲಿ ಯಕ್ಷಗಾನ ಅಕಾಡೆಮಿಯ ವತಿಯಿಂದ ಯಕ್ಷಬಳಗದ ಸಹಯೋಗದೊಂದಿಗೆ ಜರಗಿದ ಕಾರ್ಯಕ್ರಮಗಳಿಗೆ ಅವಕಾಶವಿತ್ತು ಪೆÇ್ರೀತ್ಸಾಹಿಸಿ ಶ್ರೀಗಳು ತಾಳಮದ್ದಳೆಯಲ್ಲಿ ಭಾಗವತಿಕೆ ಮಾಡಿದುದನ್ನು ನೆನಪಿಸಿಕೊಂಡರು. ನಾರಾಯಣೀಯಂ ಮನೆಯವರಾದ ಸುರೇಶ ಪದಕಣ್ಣಾಯ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries