ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಕ್ಲಬ್ಬಿನ ಹಿತೈಷಿ, ಅಸೌಖ್ಯಪೀಡಿತರಾಗಿರುವ ರಾಜ ಬಾಡೂರು ಅವರಿಗೆ ಚಿಕಿತ್ಸಾ ಸಹಾಯಧನ ವಿತರಿಸಲಾಯಿತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರಾಜ ಬಾಡೂರು ಅವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯಲಿದ್ದು, ಭಾರಿ ವೆಚ್ಚ ನಿರೀಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಕ್ಲಬ್ಬಿನ ವತಿಯಿಂದ ಸಂಗ್ರಹಿಸಲಾದ ಮೊತ್ತವನ್ನು ಅವರ ನಿವಾಸದಲ್ಲಿ ಕ್ಲಬ್ ಅಧ್ಯಕ್ಷ ಪದ್ಮನಾಭ ಸುವರ್ಣ ನೇತೃತ್ವದಲ್ಲಿ ಧನಸಹಾಯದ ಮೊತ್ತವನ್ನು ರಾಜ ಬಾಡೂರು ಅವರಿಗೆ ಹಸ್ತಾಂತರಿಸಲಾಯಿತು.
ಕ್ಲಬ್ ಪದಾಧಿಕಾರಿಗಳಾದ ಚಂದ್ರ ಅಮೆಕ್ಕಳ, ಸುಜಿತ್ ಬಜಕೂಡ್ಲು ಪದ್ಮನಭ ಆಚಾರ್ಯ ಬಾಡೂರು ಮುಂತಾದವರು ಉಪಸ್ಥಿತರಿದ್ದರು.