ಕಾಸರಗೋಡು: ಕೋವಿಡ್ 19 ನಿಯಂತ್ರಣ ನಿಟ್ಟಿನಲ್ಲಿ ಸ್ಥಳೀಯ ಮಟ್ಟದ ಜನಜಾಗೃತಿ ಚುರುಕುಗೊಳಿಸಲು ಜಿಲ್ಲಾ ಮಟ್ಟದ ಐ.ಇ.ಸಿ. ಸಂಚಲನ ಸಮಿತಿ ಸಭೆ ತೀರ್ಮಾನಿಸಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಂಪರ್ಕ ಮೂಲಕ ಹರಡುತ್ತಿರುವ ಸೋಂಕಿನ ನಿಯಂತ್ರಣಕ್ಕೆ ನಗರಸಭೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನಜಾಗೃತಿ ಅನಿವಾರ್ಯ ಎಂದವರು ಅಭಿಪ್ರಾಯಪಟ್ಟರು.
ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳು ಪಾಲಿಸಬೇಕಾದ ಮತ್ತು ಸಾರ್ವಜನಿಕರು ಅನುಸರಿಸಬೇಕಾದ ಕಟ್ಟುನಿಟ್ಟುಗಳನ್ನು ಪ್ರಚಾರಗೊಳಿಸುವ ಹೊಣೆಯನ್ನು ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿಗೆ ನೀಡಲಾಗಿದೆ. ಹೈಯರ್ ಸೆಕೆಂಡರಿ ವಿಭಾಗದ ಪ್ರವೇಶಾತಿ ಮತ್ತು ಹತ್ತನೇ ತರಗತಿ ಸೇ ಪರೀಕ್ಷೆಯ ಹೊಣೆಗಾರಿಕೆ ಹೊಂದಿರುವ ಶಿಕ್ಷಕರನ್ನು ತಾತ್ಕಾಲಿಕವಾಗಿ ಮಾಸ್ಟರ್ ಯೋಜನೆಯ ಚಟುವಟಿಕೆಗಳಿಂದ ಹೊರತುಪಡಿಸಲು ಸಭೆ ನಿರ್ಧರಿಸಿದೆ. ಆದರೆ ಯೋಜನೆಯ ಹೊಣೆಗಾರಿಕೆಯಿಂದ ಅವರು ಹೊರತಾಗುವುದಿಲ್ಲ ಎಂದು ತಿಳಿಸಲಾಗಿದೆ. ಸಿ.ಎಫ್.ಎನ್.ಟಿ.ಸಿ. ಡಾಟಾ ಎಂಟ್ರಿ ಹೊಣೆಯ ಶಿಕ್ಷಕರು ಕೊರೋನಾ ರೋಗಿಗಳನ್ನು ನೇರವಾಗಿ ಸಂಪರ್ಕಿಸಬೇಕಿಲ್ಲ, ಬದಲಾಗಿ ದೂರವಾಣಿ ಮೂಲಕ ಸಂಪರ್ಕಿಸಿದರೆ ಸಾಕು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.
ಕಾಸರಗೋಡು ಥಿಯಾಟ್ರಿಕ್ಸ್ ಸೊಸೈಟಿ 65ರಿಂದ ಮೇಲ್ಪಟ್ಟವರಿಗೆ ಮತ್ತು 10 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಿಗೆ ಕೊರೋನಾ ಸಂಬಂಧ ರಸಪ್ರಶ್ನೆ ನಡೆಸಲಾಗುವುದು. ಮೊದಲ ಬಹುಮಾನ 5 ಸಾವಿರ ರೂ., ಸ್ಮರಣಿಕೆ, ದ್ವಿತೀಯ ಬುಮಾನ 2500 ರೂ., ಸ್ಮರಣಿಕೆ ಇರುವುದು. ಜಿಲ್ಲಧಿಕಾರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹೆಚ್ಚವರಿ ಎಸ್.ಪಿ. ಈ ರಸಪ್ರಶ್ನೆಗೆ ನೇತೃತ್ವ ವಹಿಸುವರು ಎಂದು ತಿಳಿಸಲಾಗಿದೆ. ಮಾಸ್ಟರ್ ಯೋಜನೆ ಜಿಲ್ಲೆಯಲ್ಲಿ ಉತ್ತಮ ಚಟುವಟಿಕೆ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಭೆ ರೇಡಿಯೋ, ಮಾಸ್ಟರ್ ವಿಷನ್, ಮಾಸ್ಟರ್ ವಾಹನ ಇತ್ಯಾದಿ ಪ್ರಚಾರ ನಡೆಸುವ ಸಂಬಂಧ ಮಾತುಕತೆ ನಡೆಸಲಾಯಿತು. ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಈ ಪ್ರಚಾರ ನಡೆಯಬೇಕು ಎಂದು ತೀರ್ಮಾನಿಸಲಾಗಿದೆ.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ದಿಲೀಪ್ ಕುಮಾರ್, ಸಂಚಾಲಕಿ ದಿವ್ಯಾ ಪಿ., ಹಿರಿಯ ವರಿಷ್ಠಧಿಕಾರಿ ಕೆ.ಜಿ.ಮೋಹನನ್, ಶುಚಿತ್ವ ಮಿಷನ್ ಸಹಾಯಕ ಸಂಚಾಲಕ ಪ್ರೇಮರಾಜನ್, ಸಮಾಜ ಸುರಕ್ಷೆ ಮಿಸನ್ ಸಂಚಾಲಕ ಜಿಷೋ ಜೇಮ್ಸ್, ರಜೀಷ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಧುಸುದನನ್ ಎಂ. ವರದಿ ವಾಚಿಸಿದರು.