ಮುಳ್ಳೇರಿಯ: ಗೋಕರ್ಣದ ಅಶೋಕೆಯಲ್ಲಿ ಜರಗಿದ ಶ್ರೀರಾಮಚಂದ್ರಾಪುರ ಮಠ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವಿದ್ಯಾ-ಚಾತುರ್ಮಾಸ್ಯದ ಅಂಗವಾಗಿ ಮುಳ್ಳೇರಿಯಾ ಹವ್ಯಕ ಮಂಡಲದ ಕುಂಬ್ಳೆ, ಗುಂಪೆ, ಕಾಸರಗೋಡು, ನಿರ್ಚಾಲು, ಪೆರಡಾಲ, ಪಳ್ಳತ್ತಡ್ಕ,ಎಣ್ಮಕಜೆ ಚಂದ್ರಗಿರಿ,ಈಶ್ವರಮಂಗಲ, ಗುತ್ತಿಗಾರು, ಸುಳ್ಯ, ಕೊಡಗು ಈ ಹನ್ನೆರಡು ವಲಯಗಳ ಗುರುಭಿಕ್ಷಾ ಪಾದುಕಾ ಪೂಜೆಯು ಸಂಪನ್ನವಾಯಿತು. ಕಾರ್ಯಕ್ರಮವು ಕೋವಿಡ್ ಮಾನದಂಡಕ್ಕೆ ಅನುಗುಣವಾಗಿ ಇತಿಮಿತಿಯನ್ನು ಅನುಸರಿಸಿ ಜರಗಿತು.
ವಿದ್ಯಾ ಚಾತುರ್ಮಾಸ್ಯ ಗೋಕರ್ಣದ ಮೂಲಮಠದಲ್ಲಿ ನೆರವೇರುತ್ತಿರುವುದು ವಿದ್ಯೆಗೆ ಒತ್ತು ನೀಡುತ್ತಿದೆ. ವಿಶ್ವವಿದ್ಯಾಪೀಠ ಮತ್ತು ಗುರುಕುಲಗಳನ್ನು ಕಟ್ಟಿಬೆಳೆಸುವ ಮಹಾಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಚಾತುರ್ಮಾಸ್ಯದ ಕೊನೆಕೊನೆಯ ಸಂದರ್ಭದಲ್ಲಿ ಸೇವೆ ಸಲ್ಲುತ್ತಿರುವುದು ಸಂಪ್ರೀತಗೊಳಿಸಿದೆ. ಸೇವೆಗಳು ಪ್ರಭು ಶ್ರೀರಾಮನಿಗೂ ನಮ್ಮ ಗುರುಪರಂಪರೆಗೂ ಗೋಮಾತೆಗೂ ಯಥೋಚಿತವಾಗಿ ಸಂದು ಅವರುಗಳ ಪೂರ್ಣಾಶೀರ್ವಾದವು ನಿಮ್ಮನ್ನು ಪೆÇರೆಯಲಿ, ನಿಮ್ಮ ಬದುಕಿನ ಬವಣೆಗಳನ್ನು ನೀಗಲಿ, ನಿಮ್ಮ ಬದುಕಿನಲ್ಲಿ ಬೆಳಕು ಮೂಡುವಂತಾಗಲಿ ಮತ್ತು ನಿಮ್ಮಿಂದ ಅನ್ಯರ ಬದುಕಿನಲ್ಲಿ ಕೂಡ ಬೆಳಕು ಮೂಡುವಂತೆ ಅಂತಹ ಒಂದು ಯೋಗ ಮತ್ತು ಶಕ್ತಿ ಕರುಣಿಸಲಿ ಎಂದು ಪ್ರಭು ಶ್ರೀರಾಮನಲ್ಲಿ ನಾವು ಪ್ರಾರ್ಥಿಸುತ್ತೇವೆ ಎಂದು ಶ್ರೀಗಳವರು ಅನುಗ್ರಹ ಆಶೀರ್ವಚನ ನೀಡಿದರು. ಮಂಡಲ , ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು.