HEALTH TIPS

ಕೋ-ಆಪರೇಟೀವ್ ಬ್ಯಾಂಕ್ ಗಳನ್ನು ಆರ್ ಬಿಐ ಮೇಲ್ವಿಚಾರಣೆ ವ್ಯಾಪ್ತಿಗೆ ತರುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

        ನವದೆಹಲಿ: ಕೋ-ಆಪರೇಟೀವ್ ಬ್ಯಾಂಕ್ ಗಳಲ್ಲಿ ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡಲು ಕೇಂದ್ರ ಸರ್ಕಾರ ಬ್ಯಾಂಕ್ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆದಿದೆ. 

     ಕೋ-ಆಪರೇಟೀವ್ ಬ್ಯಾಂಕ್ ಗಳನ್ನು ಆರ್ ಬಿಐ ನ ಮೇಲ್ವಿಚಾರಣೆ ವ್ಯಾಪ್ತಿಗೆ ತರುವುದು ಈ ತಿದ್ದುಪಡಿ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. 

      ಜೂ.26 ರಂದು ಸುಗ್ರೀವಾಜ್ಞೆ ಮೂಲಕ ಘೋಷಣೆ ಮಾಡಲಾಗಿದ್ದ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಕಾಯ್ದೆ, 2020 ನ್ನು ಈ ಹೊಸ ಕಾಯ್ದೆ ಬದಲಾವಣೆ ಮಾಡಿದೆ. 

     ಕೋ-ಆಪರೇಟೀವ್ ಬ್ಯಾಂಕ್ ಗಳ ಆಡಳಿತ ಹಾಗೂ ಠೇವಣಿದಾರರ ಹಣವನ್ನು ರಕ್ಷಣೆ ಈ ಕಾಯ್ದೆಯ ಉದ್ದೇಶವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

     ಕೋ-ಆಪರೇಟೀವ್ ಬ್ಯಾಂಕ್ ಗಳ ಪರಿಸ್ಥಿತಿ ಹದಗೆಟ್ಟಿದ್ದರಿಂದ ಲಾಕ್ ಡೌನ್ ಅವಧಿಯಲ್ಲಿ ತಿದ್ದುಪಡಿ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲಾಗಿತ್ತು ಎಂದು ಸೀತಾರಾಮನ್ ಹೇಳಿದ್ದಾರೆ. 

      ಮಾರ್ಚ್ 2019 ರಲ್ಲಿ ಶೇ.7.27 ರಷ್ಟಿದ್ದ ಕೋ-ಆಪರೇಟೀವ್ ಬ್ಯಾಂಕ್ ಗಳ ಎನ್ ಪಿಎ, 2020 ರ ಮಾರ್ಚ್ ವೇಳೆಗೆ ಶೇ.10ಕ್ಕೆ ಏರಿಕೆಯಾಗಿದೆ. 2018-19 ಆರ್ಥಿಕ ವರ್ಷದಲ್ಲಿ 277  ನಗರ ಸಹಕಾರಿ ಬ್ಯಾಂಕ್ ಗಳು ನಷ್ಟ ಎದುರಿಸಿವೆ. 100 ಕ್ಕೂ ಹೆಚ್ಚು ಬ್ಯಾಂಕ್ ಗಳು ಮಿನಿಮಮ್ ರೆಗ್ಯುಲೇಟರಿ ಕ್ಯಾಪಿಟಲ್ ರಿಕ್ವೈರ್ಮೆಂಟ್ ನ್ನೂ ಹೊಂದಿರಲಿಲ್ಲ. 47 ಬ್ಯಾಂಕ್ ಗಳು ನೆಗೆಟೀವ್ ನೆಟ್ ವರ್ತ್ ನ್ನು ಹೊಂದಿದ್ದವು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

     ಮಸೂದೆಯ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಠೇವಣಿದಾರರ ದೃಷ್ಟಿಯಿಂದ ಬ್ಯಾಂಕ್ ವಿಶ್ವಾಸದ ಭಂಡಾರವಾಗಿರುತ್ತದೆ.

      ಯಾವುದೇ ಆರ್ಥಿಕ ಸಂಸ್ಥೆ ಬ್ಯಾಂಕ್ ಎಂಬ ಪದ ಪ್ರಯೋಗಿಸಿದಾಕ್ಷಣ ಠೇವಣಿದಾರರು ಅದು ಆರ್ ಬಿಐ ನ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಭಾವಿಸಿ, ಠೇವಣಿದಾರರು ಸುರಕ್ಷಿತರಾಗಿರುತ್ತಾರೆ ಎಂದುಕೊಳ್ಳುತ್ತಾರೆ.

     ಠೇವಣಿದಾರನಿಗೆ ಕೋ-ಆಪರೇಟೀವ್ ಬ್ಯಾಂಕ್ ಗಳು ಹಾಗೂ ಬ್ಯಾಂಕ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಕಾನೂನುಗಳಿವೆ ಎಂಬುದು ತಿಳಿದಿರುವುದಿಲ್ಲ. ಉಭಯ ನಿಯಂತ್ರಣಗಳು ವಿಲಕ್ಷಣ ಹಾಗೂ ಪ್ರಾಯೋಗಿಕ, ಸಾಂವಿಧಾನಿಕ ಸಮಸ್ಯೆಗಳನ್ನು ತಂದೊಡ್ಡುತ್ತವೆ.

     ಇದೇ ಕಾರಣದಿಂದಾಗಿ ಯೆಸ್ ಬ್ಯಾಂಕ್, ಪಂಜಾಬ್-ಮಹಾರಾಷ್ಟ್ರ ಕೋ-ಆಪರೇಟೀವ್ ಬ್ಯಾಂಕ್, ಗುರುರಾಘವೇಂದ್ರ ಬ್ಯಾಂಕ್ ಸಹಕಾರ ಬ್ಯಾಂಕ್ ನ ಠೇವಣಿದಾರರು ಯಾತನೆ ಅನುಭವಿಸುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries