ಕೊಚ್ಚಿ: ರಾಜ್ಯ ಸರ್ಕಾರದ ಹೆಮ್ಮೆಯೆಂದೇ ಬಿಂಬಿಸಲ್ಪಟ್ಟ ಲೈಫ್ ಮಿಷನ್ ಅಕ್ರಮಗಳ ತನಿಖೆಯನ್ನು ಸಿಬಿಐ ವಹಿಸಲಿದ್ದು ಎಲ್ ಡಿ ಎಫ್ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಲಿದೆ ಎಂದು ವಿಶ್ಲೇಶಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಯಾರ ಮೇಲೂ ಆರೋಪ ಹೊರಿಸಲಾಗಿಲ್ಲ. ಲೈಫ್ ಮಿಷನ್ ವಹಿವಾಟಿಗೆ ಸಂಬಂಧಿಸಿದಂತೆ ಕೊಚ್ಚಿಯ ಭ್ರಷ್ಟಾಚಾರ ನಿಗ್ರಹ ಘಟಕ ಪ್ರಕರಣ ದಾಖಲಿಸಿದೆ. ಲೈಫ್ ಮಿಷನ್ ಉದ್ದೇಶಗಳನ್ನು ಗಾಳಿಗೆ ತೂರಿ ಬೇರೆ ವಿಷಯಗಳಿಗೆ ಸಂಬಂಧಿಸಿ ವಿದೇಶ ನಿಧಿಯನ್ನು ಬಳಸಲಾಗಿದೆ ಎಂಬ ಆರೋಪದ ಮೇರೆಗೆ ಈ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಕೊಚ್ಚಿಯ ಸಿಬಿಐ ನ್ಯಾಯಾಲಯದಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಎಂದು ಸಿಬಿಐ ಹೇಳಿದೆ. ಲೈಫ್ ಮಿಷನ್ ಯೋಜನೆಯಲ್ಲಿ ಅಕ್ರಮಗಳು ನಡೆದಿದೆ ಎಂದು ಆರೋಪಿಸಿ ಶಾಸಕ ಅನಿಲ್ ಅಕ್ಕರ ಸಿಬಿಐಗೆ ದೂರು ನೀಡಿದ್ದರು. ರೆಡ್ ಕ್ರೆಸೆಂಟ್ ನೊಂದಿಗಿನ ಒಪ್ಪಂದವು ಕಾನೂನುಬಾಹಿರ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಲೈಫ್ ಮಿಷನ್ ಯೋಜನೆಯಲ್ಲಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ವಿಜಿಲೆನ್ಸ್ ತನಿಖೆಯನ್ನು ಪ್ರಾರಂಭಿಸಿತ್ತು. ಆದರೆ ಪ್ರತಿಪಕ್ಷಗಳು ತನಿಖೆಯನ್ನು ಸಿಬಿಐಗೆ ವಹಿಸಲು ಒತ್ತಾಯಿಸಿ ಪ್ರತಿಭಟನೆಗಳಿಗೆ ತೊಡಗಿದ್ದವು. ವಿಜಿಲೆನ್ಸ್ ತನಿಖೆಯಲ್ಲಿ ವಿಶ್ವಾಸವಿಲ್ಲ ಎಂದು ಯುಡಿಎಫ್ ಅತೃಪ್ತಿ ವ್ಯಕ್ತಪಡಿಸಿತ್ತು.