ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ತೀವ್ರತೆಯ ಹಿನ್ನೆಲೆಯಲ್ಲಿ ವಿಧಾನಸಭೆ ಉಪಚುನಾವಣೆ ನಡೆಸಬಾರದು ಎಂದು ತಿಳಿಸಿ ರಾಜ್ಯ ಸರ್ಕಾರ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ ಎಂಬುದರ ಪುರಾವೆಗಳು ಹೊರಬಿದ್ದಿವೆ. ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಅವರು ಆಗಸ್ಟ್ 21 ರಂದು ಚುನಾವಣಾ ಆಯೋಗಕ್ಕೆ ಕಳುಹಿಸಿದ ಪತ್ರದ ಪ್ರತಿ ಇದೀಗ ಹೊರಬಿದ್ದಿದೆ. ಉಪಚುನಾವಣೆ ನಡೆಯಬೇಕಿರುವ ಕುಟ್ಟನಾಡ್ ಕ್ಷೇತ್ರದಲ್ಲಿ ಮಳೆ ಪ್ರವಾಹದ ಸಾಧ್ಯತೆಯ ಹಿನ್ನೆಲೆಯಲ್ಲೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಉಪಚುನಾವಣೆ ಅಸಾಧ್ಯವಾಗಲಿದೆ ಎಮದು ಬೊಟ್ಟುಮಾಡಿದೆ.
ಕೋವಿಡ್ ಸನ್ನಿವೇಶದಲ್ಲಿ ಸಾಮಾಜಿಕ ದೂರವನ್ನು ಇಟ್ಟುಕೊಂಡು ಚುನಾವಣೆ ನಡೆಸುವುದು ಕಷ್ಟ ಎಂದು ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಕುಟ್ಟನಾಡ್ ಕ್ಷೇತ್ರದಲ್ಲಿ 1,61,860 ಮತದಾರರಿದ್ದರೆ. ಚವಾರ ಕ್ಷೇತ್ರದಲ್ಲಿ 1,32,860 ಮತದಾರರನ್ನು ಹೊಂದಿದೆ. ಈ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಷ್ಟ. ಈ ಸಂದರ್ಭಗಳು ಚುನಾವಣೆಯ ಸುಗಮ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ತಿಳಿಸಿರುವರು.
ಸರ್ಕಾರಿ ಸಂಸ್ಥೆಗಳಾದ ಪೆÇಲೀಸ್, ಆರೋಗ್ಯ ಇಲಾಖೆ, ಸ್ಥಳೀಯ ಸರ್ಕಾರ ಮತ್ತು ಕಂದಾಯ ಇಲಾಖೆ ತಿಂಗಳುಗಳಿಂದ ಕೋವಿಡ್ ಕರ್ತವ್ಯದಲ್ಲಿದೆ. ಅವರಿಗೆ ಚುನಾವಣಾ ಕರ್ತವ್ಯವನ್ನೂ ನೀಡುವುದು ಸೂಕ್ತವಲ್ಲ. ವಿಧಾನಸಭಾ ಚುನಾವಣೆಗಳ ಬಳಿಕದ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಆಡಳಿತ ನಡೆಸಲು ಕೆಲವೇ ತಿಂಗಳುಗಳ ಬಳಿಕ ಬರುವ ವಿಧಾನ ಸಭಾ ಚುನಾವಣೆಯಿಂದ ಹೆರಚ್ಚು ಕಾಲಾವಕಾಶವೂ ಲಭಿಸದೆಂದು ವರದಿ ಬೆಳಕು ಚೆಲ್ಲಿದೆ. ಕೇರಳ ವಿಧಾನಸಭೆಯ ಅವಧಿ 2021 ರ ಮೇ 21 ರವರೆಗೆ ಇರುವುದರಿಂದ ಹೊಸ ಸದಸ್ಯರಿಗೆ ಕೆಲಸ ಮಾಡಲು ಕಡಿಮೆ ಸಮಯವಿರುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ತಿಳಿಸಿದ್ದಾರೆ.
ನಾಲ್ಕು ತಿಂಗಳ ಕಾಲ ಸಂಸತ್ ಸದಸ್ಯರನ್ನು ಆಯ್ಕೆ ಮಾಡಲು ಉಪಚುನಾವಣೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ಎಡಪಂಥೀಯ ಮತ್ತು ಸರ್ಕಾರದ ಅಭಿಪ್ರಾಯವಾಗಿದೆ. ಉಪಚುನಾವಣೆಗೆ ಬಿಜೆಪಿ ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿತ್ತು. ಆದರೆ ಉಪಚುನಾವಣೆಯನ್ನು ಮಾತ್ರ ಮುಂದೂಡುವುದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಯುಡಿಎಫ್ ಅಭಿಪ್ರಾಯಪಟ್ಟಿದೆ. ಕೋವಿಡ್ ಹರಡುವ ಸಾಧ್ಯತೆ ಇರುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ಮುಂದೂಡಬೇಕು ಮತ್ತು ಆಗ ಮಾತ್ರ ಯುಡಿಎಫ್ ಉಪಚುನಾವಣೆಗಳನ್ನು ಕೈಬಿಡುವ ಕ್ರಮವನ್ನು ಬೆಂಬಲಿಸುವುದು ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಿಳಿಸಿದ್ದಾರೆ.