ಮಂಜೇಶ್ವರ: ಬಿ.ಎಂ.ಎಸ್ ಮಂಜೇಶ್ವರ ಪಂಚಾಯತಿ ಸಮಿತಿ ಆಶ್ರಯದಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ರಾಷ್ಟೀಯ ಕಾರ್ಮಿಕ ದಿನಾಚರಣೆ ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ರಾಷ್ಟೀಯ ಸ್ವಯಂ ಸೇವಕ ಸಂಘದ ನೇತಾರ ಮಹಾಬಲೇಶ್ವರ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ವಲಯ ಅಧ್ಯಕ್ಷ ಭಾಸ್ಕರ ಬಿ.ಎಮ್. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ನೇತಾರರಾದ ರವಿ ಮಜಲ್, ಲೋಹಿತ್ ಮಜಿಬೈಲ್, ಶ್ರೀಧರ ಬಿ. ಎಮ್, ಕೊರಗಪ್ಪ ರೈ ಮಜಿಬೈಲ್, ಪ್ರಕಾಶ್ ಕೆ. ಪಿ., ಯತೀಶ್ ಮಂಜೇಶ್ವರ, ಮಹೇಶ್ ಭಗವತೀ, ರಮೇಶ್ ಬಿ.ಎಮ್, ಗಿರೀಶ್ ದುರ್ಗಿಪಳ್ಳ ಮೊದಲಾದವರು ಭಾಗವಹಿಸಿದ್ದರು. ಸಮಾರಂಭದ ಅಂಗವಾಗಿ ಮೊದಲಿಗೆ ಧ್ವಜಾರೋಹಣ ನಡೆಯಿತು.