ನವದೆಹಲಿ: ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ತೆಗೆದುಹಾಕಲಾದ ಕೆಲವೇ ಗಂಟೆಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಆಪ್ ವಾಪಸ್ಸಾಗಿದೆ.
ಸ್ಪೋರ್ಟ್ಸ್ ಬೆಟ್ಟಿಂಗ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಗೂಗಲ್ ಪ್ಲೇ ಸ್ಟೋರ್ ಪೇಟಿಎಂ ನಿಂದ ತೆಗೆದುಹಾಕಿತ್ತು.
ಆಪ್ ನಲ್ಲಿ ಇತ್ತೀಚೆಗಷ್ಟೇ ಪರಿಚಯಿಸಲಾಗಿದ್ದ ಗೇಮ್ ನಿಂದ ಕ್ಯಾಶ್ ಬ್ಯಾಕ್ ಆಯ್ಕೆಯನ್ನ್ ಹಿಂಪಡೆದ ಬಳಿಕ ಪ್ಲೇ ಸ್ಟೋರ್ ನಲ್ಲಿ ಮರಳಿ ಪೇಟಿಎಂ ನ್ನು ಸ್ಥಾಪಿಸಲಾಗಿದೆ.
ಅಪ್ಡೇಟ್: ನಾವು ವಾಪಸ್ಸಾಗಿದ್ದೇವೆ ಎಂದು ಟ್ವೀಟ್ ಮೂಲಕ ಪೇಟಿಎಂ ಹೇಳಿದೆ. 'ಸ್ಪೋರ್ಟ್ಸ್ ಬೆಟ್ಟಿಂಗ್ ಗೆ ಅವಕಾಶ ನೀಡುವ ಆಪ್ ಗಳಿಗೆ ಅವಕಾಶ ನೀಡುವುದಿಲ್ಲ ಅಂತಹ ಆಪ್ ಗಳನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕುವುದಾಗಿ ಗೂಗಲ್ ಬ್ಲಾಗ್ ಸ್ಪಾಟ್ ನಲ್ಲಿ ತಿಳಿಸಿದೆ.
"ಆಪ್ ನ್ನು ಪ್ಲೇ ಸ್ಟೋರ್ ನ ನೀತಿಗಳ ಉಲ್ಲಂಘನೆಗಾಗಿ ನಿಷೇಧಿಸಲಾಗಿತ್ತು. ಐಪಿಎಲ್ ಗೂ ಮುನ್ನ ಈ ನೀತಿಯನ್ನು ಪ್ರಕಟಿಸಲಾಗಿದ್ದು, ಆಪ್ ನ ಲಭ್ಯತೆಯ ಮೇಲೆ ಮಾತ್ರ ಪರಿಣಾಮ ಬೀರಿತ್ತು ಎಂದು ಇ-ಮೇಲ್ ಪ್ರತಿಕ್ರಿಯೆಯಲ್ಲಿ ಗೂಗಲ್ ತಿಳಿಸಿದೆ.