ಕಾಸರಗೋಡು: ವಿಷಪೂರಿತ ಹಾವಿನ ಕಡಿತದಿಂದ ಸಂಭವಿಸಬಹುದಾದ ಸಾವನ್ನು ತಪ್ಪಿಸಲು ಸಾರ್ವಜನಿಕರಿಗಾಗಿ ಆರೋಗ್ಯ ಇಲಾಖೆ ತಿಳಿಸುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಪ್ರಥಮ ಶುಶ್ರೂಷೆ:
ಕಡಿದ ಹಾವು ವಿಷಪೂತಿವೋ, ಅಲ್ಲವೋ ಎಂದು ತಿಳಿಯಲು ಕಡಿತದ ಗಾಯದ ಆಳದಿಂದ ತಿಳಿಯಬಹುದು. ವಿಷಪೂರಿತ ಹಾವಿನ ಕಡಿತವಾಗಿದ್ದರೆ ಸೂಜಿಯಿಂದ ಚುಚ್ಚಿದಂತೆ ಎರಡು ಆಳವಾದ ಗಾಯಗಳು ಕಾಣುವುದು. ಕಡಿದ ಹಾವಿದ ಗಾತ್ರದ ಹಿನ್ನೆಲೆಯಲ್ಲಿ ಕೆಲವೊಮ್ಮೆ ಎರಡೂ ಗಾಯಗಳ ನಡುವೆ ವ್ಯತ್ಯಾಸವಿರಬಹುದು.ಕೆಲವೊಮ್ಮೆ ಹಾವಿನ ಇತರ ಹಲ್ಲುಗಳ ಗಾಯಗಳೂ ಕಂಡುಬಮದರೂ, ವಿಷದ ಹಲ್ಲುಗಳ ಕಡಿತದ ಆಳ ಅಧಿಕವಿರುವುದು. ವಿಷವುಳ್ಳ ಹಾವಿನ ಕಡಿತವಾಗಿದ್ದರೆ, ಗಾಯದ ಜಾಗದಲ್ಲಿ ವಿಷಾಂಶ ಲಕ್ಷಣಗಳಿದ್ದು, ತೀವ್ರ ನೋವಿ, ಬಾವು ತಲೆದೋರಬಹುದು.ಹಾವಿನ ಜಾತಿ, ಒಳ ಪ್ರವೇಶಿಸಿದ ವಿಷದ ಪ್ರಮಾಣದ ಮೇಲೆ ಮೇಲೆ ತಿಳಿಸಿದ ಲಕ್ಷಣಗಲೂ ಅಧಿಕವಾಗಿರುವುದು.
ಕಡಿದ ತಕ್ಷಣ ನಡೆಸಬೇಕಾದುದು:
ಒಂದೊಮ್ಮೆ ಹಾವು ಕಡಿದರೆ ಆತಂಕಕ್ಕೊಳಗಾಗ ಬೇಡಿ. ಹೆದರಿ ಓಡಕೂಡದು. ಇದು ಹಾವಿನ ವಿಷ ದೇಹದಲ್ಲಿ ಬಲುಬೇಗ ಹರಡಲು ಕಾರಣವಾಗುತ್ತದೆ. ಕಡಿತಕ್ಕೊಳಗಾದ ದೇಹದ ಭಾಗದಿಂದ ರಕ್ತದ ಸಹಿತ ವಿಷವನ್ನೂ ಸಾಧ್ಯವಾದಷ್ಟೂ ಹಿಂಡಿ ಯಾ ಗಾಯಗೊಳಿಸಿ ತೆಗೆಯಬೇಕು. ಕಡಿತಕ್ಕೊಳಗಾದವರನ್ನು ಯಾವ ಕಾರಣಕ್ಕೂಮಲಗಿಸಕೂಡದು. ಗಾಯಗೊಂಡ ಅವಯವವನ್ನು ಹೃದಯಭಾಗದಿಂದ ಕೆಳಗಿರುವಂತೆ ನೊಡಿಕೊಳ್ಳ್ಳಿ. ತಕ್ಷಣ ಆಂಟಿ ಸ್ನೇಕ್ ವೇನಂ ಇರುವ ಆಸ್ಪತ್ರೆಗೆ ಅವರನ್ನು ಒಯ್ಯಬೇಕು.
ಕಾಳಿಂಗ ಸರ್ಪ, ಸರ್ಪ ಸಹಿತ ಹಾವು ಇತ್ಯಾದಿ ಹಾವುಗಳ ವಿಷ ಮಾನವ ದೇಹದ ನಾಡೀಮಂಡಲಕ್ಕೆ ನೇರವಾಗಿ ಬಾಧಿಸುತ್ತದೆ. ಮಂಡಲದ ಹಾವಿನ ಕಡಿತದಿಂದ ವಿಷ ರಕ್ತ ಮಂಡಲಕ್ಕೆ ಬಧೆ ನೀಡುತ್ತದೆ.
ನಾಡೀ ಮಂಡಲಕ್ಕೆ ಬಧೆ ನೀಡುವ ವಿಷದಿಂದ ದೃಷ್ಟಿ ಮಂದ, ಉಸಿರಾಟಕ್ಕೆ ತೊಂದರೆ, ಮಾಂ ಪೇಷಿಗಳಲ್ಲಿ ನೋವು ಇತ್ಯಾದಿ ತಲೆದೋರುತ್ತದೆ. ರಕ್ತ ಮಂಡಲಕ್ಕೆ ಬಧಿಸುವ ವಿಷದಿಂದ ಕಡಿತದ ಜಾಗದಲ್ಲಿ ಬಾವು, ತಲೆಸುತ್ತು ತಲೆದೋರುತ್ತದೆ. ಜೊತೆಗೆ ರೋಮಕೂಪಗಳಲ್ಲಿ ರಕ್ತ ಸೋರುತ್ತದೆ.
ಕೆಲವು ಸತ್ಯಾಂಶಗಳು:
ರಾಜ್ಯದಲ್ಲಿ ಒಟ್ಟು 101 ವಿಧದ ಹಾವುಗಳಿವೆ. ಇವುಗಳಲ್ಲಿ ಮಾನವರಿಗೆ ಜೀವಭೀತಿಯುಂಟು ಮಾಡುವವು ಕೇವಲ 10. ಅದರಲ್ಲೂ 5 ವಿಧದವು ಕಡಲಹಾವುಗಳು. ಈ ಹಿನ್ನೆಲೆಯಲ್ಲಿ ನೆಲದಲ್ಲಿ ಕಂಡುಬರುವ ಸೇ 95 ಹಾವುಗಳೂ ಅಪಾಯಕಾರಿಗಳಲ್ಲ. ಜೊತೆಗೆ ವಿಷದ ಹಾವುಗಳ ಎಲ್ಲ ರೀತಿಯ ಕಡಿತ ಮಾನವ ಜೀವ ಕಳೆಉದಕೊಳ್ಳುವ ಅಪಾಯಗಳಿಲ್ಲ. ಕಡಿತದ ವೇಳೆ ಹಲ್ಲುಗಳು ಆಳವಾಗಿ ಇಳಿದಿದ್ದರೆ ಮಾತ್ರ ವಿಷವೂ ಒಳಪ್ರವೇಶಿಸುತ್ತದೆ. ಆಳವಾಗಿ ಕಡಿಯದೇ ಇದ್ದಲ್ಲಿ ವಿಷ ಒಳಪ್ರವೇಶಿಸುವ ಸಾಧ್ಯತೆ ಇರುವುದು ಇಲ್ಲ.
ನಕಲಿ ವೈದ್ಯರ ಬಗ್ಗೆ ಎಚ್ಚರ:
ಈ ಮೇಲಿನ ವಿಚಾರಗಳನ್ನು ನಾಡಿನ ಕೆಲವು ನಕಲಿ ವೈದ್ಯರು ದುರುಪಯೋಗ ಪಡಿಸುತ್ತಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು. ಕಲ್ಲುಗಳನ್ನು ಇರಿಸಿ, ಹಸುರೆಲೆಗಳನ್ನು ಹಿಂಡಿಹಾವಿನ ವಿಷವನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದವರು ನುಡಿದರು.
ವೈಜ್ಞಾನಿಕ ಚಿಕಿತ್ಸಾ ವಿಧಾನ:
ಹಾವುಗಳ ವಿಷ ಪೆÇ್ರೀಟಿನ್ ಭರಿತವಾಗಿವೆ. ಈ ಪೆÇ್ರೀಟೀನ್ ಗಳನ್ನು ನಿಶಕ್ತಗೊಳಿಸಲು ಕುದುರೆಗಳಿಂದ ತೆಗೆದು ನಿರ್ಮಿಸಲಾದ ಮರು ಔಷಧ ಬಳಸಲಾಗುತ್ತದೆ. ಸರ್ಪ, ಮಂಡಲದ ಹಾವು ಇತ್ಯಾದಿ ವಿಷಗಳನ್ನು ಕುದುರೆಗೆ ಚುಚ್ಚುಮದ್ದಿನ ಮೂಲಕ ನೀಡಿ, ಆ ಮೂಲಕ ಕುದುರೆಯ ಶರೀರದಲ್ಲಿ ಉದ್ಭವವಾಗುವ ಆಂಟಿಬಾಡಿಯನ್ನು ಪಡೆಯಲಾಗುತ್ತದೆ.
ಎಲ್ಲೆಲ್ಲಿದೆ ಔಷಧ?:
ವಿಷದ ಹಾವಿನ ಕಡಿತವುಂಟಾದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗಳನ್ನು ಸಂಪರ್ಕಿಸಬೇಕು. ಪ್ರತ್ಯೌಷಧ ಇಲ್ಲದ ಆಸ್ಪತ್ರೆಗೆ ತೆರಳಿ ಕಾಲಹರಣ ನಡೆಸಕೂಡದು ಎಂದವರು ಸಂದೇಶ ನೀಡಿರುವರು.