ಕೊಚ್ಚಿ: ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ)ಪ್ರಕರಣ ದಾಖಲಿಸಿದೆ. ಮನಿ ಲಾಂಡರಿಂಗ್ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬಿನೀಶ್ ಅವರ ಸಂಪೂರ್ಣ ಆದಾಯ, ಸ್ಥಿರ-ಚರ ಆಸ್ತಿಗಳ ಮೂಲ ಪತ್ತೆ ನಡೆಸಲಾಗುವುದೆಂದು ಇಡಿ ನೋಂದಣಿ ಇಲಾಖೆಗೆ ಪತ್ರವನ್ನು ಸಲ್ಲಿಸಿದೆ. ಈ ಹಿಂದೆ ಬಿನೀಶ್ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿ ಬಿಡುಗಡೆ ಮಾಡಿತ್ತು.
ಕಳೆದ ಒಂಬತ್ತು ದಿನಗಳಲಲಿ 11 ಗಂಟೆಗಳ ಕಾಲ ಬಿನೀಶ್ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದೆ. ಅನುಮತಿಯಿಲ್ಲದೆ ಆಸ್ತಿಗಳನ್ನು ಖರೀದಿಸಿ ಮಾರಾಟ ಮಾಡಬಾರದು ಎಂದು ಇಡಿ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಇಡಿ ನೋಂದಣಿ ಇಲಾಖೆಗೆ ಪತ್ರ ಕಳುಹಿಸಿದೆ.
ಬಿನೀಶ್ ಯುಎಪಿಎ ಕಾಯ್ದೆಯ ಸೆಕ್ಷನ್ 16, 17 ಮತ್ತು 18 ರ ಅಡಿಯಲ್ಲಿ ಅಪರಾಧ ಎಸಗಿದ್ದಾರೆಂದು ಶಂಕಿಸಲಾಗಿದೆ ಮತ್ತು ಬಿನೀಶ್ ಗೆ ಸೇರಿದ ಆಸ್ತಿಗಳನ್ನು ಇಡಿಯ ಅರಿವಿಲ್ಲದೆ ಮಾರಾಟ ಮಾಡಬಾರದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬಿನೀಶ್ ಕಳೆದ ಒಂದು ತಿಂಗಳುಗಳಿಂದ ಜಾರಿ ನಿರ್ದೇಶನಾಲಯದ ನಿರೀಕ್ಷಣೆಯಲ್ಲಿದ್ದರು. ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯಲ್ಲಿ ವೀಸಾ ಸ್ಟ್ಯಾಂಪಿಂಗ್‍ಗೆ ಸಂಬಂಧಿಸಿದಂತೆ ಬಿನೀಶ್ ಯುಎಇ ಎಫೆಕ್ಟ್ಸ್ ಸೊಲ್ಯೂಷನ್ಸ್‍ನಿಂದ ಲಾಭಾಂಶವನ್ನು ಪಡೆದಿದ್ದಾರೆ ಮತ್ತು ಅವರು ಕಂಪನಿಯ ನಿರ್ದೇಶಕರಾಗಿದ್ದಾರೆ ಎಂಬ ಹೇಳಿಕೆಯ ಆಧಾರದ ಮೇಲೆ ಸೆ. 9 ರಂದು ಬಿನೀಶ್ ಅವರನ್ನು ಇಡಿ ಕೊಚ್ಚಿ ಕಚೇರಿಗೆ ಕರೆಸಲಾಗಿತ್ತು.