ಕಾಸರಗೋಡು: ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜಯಂತಿ ಅಂಗವಾಗಿ ಬಿಜೆಪಿ ನೇತೃತ್ವದಲ್ಲಿ ರಾಜ್ಯ ವ್ಯಾಪಕವಾಗಿ ಸಂಸ್ಮರಣೆ ಕಾರ್ಯಕ್ರಮ ಜರಗಿತು.
ಇದರಂತೆ ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯಾಲಯದಲ್ಲಿ ಪುಷ್ಪಾರ್ಚನೆ ಹಾಗು ಧ್ವಜಾರೋಹಣ ನಡೆಯಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ ಧ್ವಜಾರೋಹಣಗೈದು ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಸದಾನಂದ ರೈ, ಕಾರ್ಯದರ್ಶಿಗಳಾದ ಎನ್.ಸತೀಶ್, ಸವಿತಾ ಟೀಚರ್, ಮನುಲಾಲ್ ಮೇಲತ್ತ್, ಜಿಲ್ಲಾ ಕೋಶಾ„ಕಾರಿ ಜಿ.ಚಂದ್ರನ್, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಧನಂಜಯನ್ ಮಧೂರು, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅಂಜು ಜೋಸ್ಟಿ, ಕೌನ್ಸಿಲರ್‍ಗಳಾದ ಉಮಾ ಕಡಪ್ಪುರ, ಶ್ರೀಲತಾ ಟೀಚರ್, ಅರುಣ್ ಕುಮಾರ್ ಶೆಟ್ಟಿ, ಜಯಪ್ರಕಾಶ್, ಯುವಮೋರ್ಚಾ ಮಂಡಲ ಉಪಾಧ್ಯಕ್ಷ ಗೌತಂ ಕೃಷ್ಣ ಮೊದಲಾದವರು ಭಾಗವಹಿಸಿದರು.