ಕಾಸರಗೋಡು: ಮುಳಿಯಾರ್ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ 31 ನೆರೆಕೆರೆ ಕೂಟಗಳ 148 ಫಲಾನುಭವಿಗಳಿಗೆ 12,35,000 ರೂ. ಸಾಲ ವಿತರಿಸಲಾಗಿದೆ. ಮುಳಿಯಾರ್ ಸಿಡಿಎಸ್ ಮೈಕ್ರೋ ಕ್ರೆಡಿಟ್ ಸಾಲವನ್ನು ಕೇರಳ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಯ ಸಹಯೋಗದೊಂದಿಗೆ ಮುಳಿiÀiÁರ್ ಪಂಚಾಯತಿಯಲ್ಲಿ ವಿತರಿಸಲಾಯಿತು.
ಉದುಮ ಶಾಸಕ ಎ.ಕೆ.ಕುಂಞÂ ರಾಮನ್ ಸಮಾರಂಭವನ್ನು ಉದ್ಘಾಟಿಸಿದರು. ಮುಳಿಯಾರ್ ಗ್ರಾಮ ಪಂಚಾಯತಿ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‍ಬಿಸಿಡಿಸಿ ಕಾಪೆರ್Çರೇಶನ್ ನ ವಿವಿಧ ಸಾಲ ಯೋಜನೆಗಳು ಮತ್ತು ಸೂಕ್ಷ್ಮ ಸಾಲ ಸಾಲಗಳ ಬಗ್ಗೆ ಜಿಲ್ಲಾ ವ್ಯವಸ್ಥಾಪಕ ಕೃಷ್ಣಕುಮಾರಿ ವಿವರಿಸಿದರು.
ಮುಳಿಯಾರ್ ಸಿಡಿಎಸ್ ಅಧ್ಯಕ್ಷೆ ಪ್ರೇಮವತಿ ವಿ ಅವರು ಸ್ವಾಗತಿಸಿದರು. ಮುಳಿಯಾರ್ ಪಂಚಾಯತ್ ಉಪಾಧ್ಯಕ್ಷ ಗೀತಾ ಗೋಪಾಲನ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಜೀಲಾ ಅಸ್ಲಂ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಬೀಸಾ ಮುಹಮ್ಮದ್ ಕುಂಞÂ ಸದಸ್ಯರಾದ ಮಾಧವನ್, ಶೋಭಾ, ಮಿನಿ, ಏಷ್ಯಾ ಹಮೀದ್, ಅನೀಸಾ ಮನ್ಸೂರ್, ಕೆಎಸ್‍ಬಿಸಿಡಿಸಿ ಯೋಜನಾ ಸಹಾಯಕ ಎನ್. ಎಂ ಮೋಹನನ್ ಮಾತನಾಡಿದರು. ಮುಳಿಯಾರ್ ಸಿಡಿಎಸ್ ಉಪಾಧ್ಯಕ್ಷೆ ಉಷಾ ಗೋಪಾಲನ್ ವಂದಿಸಿದರು.