ಕೊಚ್ಚಿ: ಕೊಚ್ಚಿ ಮೆಟ್ರೋದ ಥೈಕುಡಮ್-ಪೆಟ್ಟಾ ಸೇವೆ ಸೋಮವಾರದಿಂದ ಪ್ರಾರಂಭವಾಗಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೊಸ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದು ಕೊಚ್ಚಿ ಮೆಟ್ರೊದ ಮೊದಲ ಹಂತವನ್ನು ಅಲುವಾದಿಂದ ಪೆಟ್ಟಾಗೆ ಪೂರ್ಣಗೊಳಿಸಲಿದೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಚ್ಚಿ ಮೆಟ್ರೋ ಮಧ್ಯಾಹ್ನ 12.30 ಕ್ಕೆ ಪೆಟ್ಟಾ ನಿಲ್ದಾಣದಿಂದ ಹೊರಡಲಿದ್ದು, ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ದೆಹಲಿಯಿಂದ ಆನ್‍ಲೈನ್‍ನಲ್ಲಿ ಫ್ಲ್ಯಾಗ್ ಮಾಡಲಿದ್ದಾರೆ. ಸಮಾರಂಭದಲ್ಲಿ ಎರ್ನಾಕುಳಂ ಸಂಸದ ಹಿಬಿ ಈಡನ್, ಸಾರಿಗೆ ಸಚಿವ ಎ.ಕೆ.ಶಶೀಂದ್ರನ್, ಮೇಯರ್ ಸೌಮಿನಿ ಜೈನ್, ಶಾಸಕರಾದ ಎಂ ಸ್ವರಾಜ್, ಪಿ.ಟಿ ಥಾಮಸ್ ಉಪಸ್ಥಿತರಿರುವರು. ಸಮಾರಂಭಗಳು ಕೋವಿಡ್ ನಿಬಂಧನೆಗೆ ಅನುಸಾರ ನಡೆಯಲಿದೆ.
ಕಳೆದ ಮೇ ತಿಂಗಳಲ್ಲಿ ಈ ಸೇವೆಯನ್ನು ಅನುಮೋದಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಿಂದಾಗಿ ವಿಳಂಬವಾಯಿತು. ಕೇರಳದ ಹೆಮ್ಮೆಯ ಕೊಚ್ಚಿ ಮೆಟ್ರೊದ ಮೊದಲ ಹಂತ ಪೂರ್ಣಗೊಂಡಾಗ, ಜನರು ಅಲುವಾದಿಂದ ಪೆಟ್ಟಾಗೆ 25.48 ಕಿ.ಮೀ ದೂರವನ್ನು ಈ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಇದನ್ನು 45 ನಿಮಿಷಗಳಲ್ಲಿ ತಲುಪಬಹುದು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ವೇಳಾಪಟ್ಟಿ ವಿಳಂಬವಾಗುವುದೆಮದು ಮೆಟ್ರೋದ ಅಧಿಕೃತರು ತಿಳಿಸಿರುವರು.