ಪೆರ್ಲ: ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಬಜಕ್ಕೂಡ್ಲು ಅಮೃತಧಾರಾ ಗೋಶಾಲೆ ಗೋಲೋಕದಲ್ಲಿ ಎಣ್ಮಕಜೆ ಹವ್ಯಕ ವಲಯ ಸೇವಾ ವಿಭಾಗದ ನೇತೃತ್ವದಲ್ಲಿ ಎಣ್ಮಕಜೆ ಮತ್ತು ಪಳ್ಳತ್ತಡ್ಕ ವಲಯ ಕಾರ್ಯಕರ್ತರು ಹಾಗು ಗೋ ಭಕ್ತರ ಸಹಕಾರದಲ್ಲಿ ಗೋಶಾಲೆಯಲ್ಲಿ ಸೇವಾ ಅಘ್ರ್ಯಶ್ರಮದಾನವು ಜರಗಿತು. ಕೋವಿಡ್ ಮಾನದಂಡದ ಇತಿಮಿತಿಯನ್ನು ಅನುಸರಿಸಿಕೊಂಡು ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.