ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊಸ ವಿಚಾರಗಳನ್ನು ಬುಧವಾರ ವಿಶದಪಡಿಸಿದ್ದಾರೆ. ಕೋವಿಡ್ ಬಾಧಿಸಿಯೂ ರೋಗಲಕ್ಷಣಗಳಿಲ್ಲದೆ ಅನಾರೋಗ್ಯದಿಂದ ಬಳಲುತ್ತಿರುವವರು ಮನೆಯಲ್ಲಿಯೇ ಇರಬೇಕು. ರೋಗಲಕ್ಷಣಗಳು ಮತ್ತು ಇತರ ಕಾಯಿಲೆ ಇರುವವರಿಗೆ ರಾಜ್ಯದ ಚಿಕಿತ್ಸಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದಿರುವರು.
ಕೋವಿಡ್ ಪಾಸಿಟಿವ್ ಆಗಿದ್ದರೂ ಲಕ್ಷಣರಹಿತರಾಗಿರುವವರಿಗೆ ಮನೆ ಕ್ವಾರಂಟೈನ್ ಅನುಮತಿಸಲಾಗಿದ್ದರೂ, ಜನರು ಸಿದ್ಧರಿಲ್ಲದ ಪರಿಸ್ಥಿತಿ ಇದೆ. ನೆರೆಹೊರೆಯವರು ಮತ್ತು ಸಂಬಂಧಿಕರ ಕೋವಿಡ್ ದೃಢರಣಕ್ಕಾಗಿ ವೈದ್ಯಕೀಯ ಕೇಂದ್ರಗಳಿಗೆ ತೆರಳುವಂತೆ ಒತ್ತಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಸಂದರ್ಭಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಿನ್ನೆ ಸಂಜೆ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ತಿಳಿಸಿರುವರು. ರಾಜ್ಯದಲ್ಲಿ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದರು.
ರಾಜ್ಯದಲ್ಲಿ ನಿನ್ನೆಯೊಂದೇ ದಿನ 5376 ಜನರಿಗೆ ಕೋವಿಡ್ ರೋಗನಿರ್ಣಯ ಮಾಡಲಾಗಿದ್ದು, 2951 ಜನರು ಗುಣಮುಖಯಾಗಿದ್ದಾರೆ. ನಿನ್ನೆ 20ಕೋವಿಡ್ ಮರಣಗಳನ್ನು ದೃಢಪಡಿಸಲಾಗಿದೆ. ಜೊತೆಗೆ ರಾಜ್ಯದ ಒಟ್ಟು ಸಾವಿನ ಸಂಖ್ಯೆ 592 ಕ್ಕೆ ಏರಿದೆ. ನಿನ್ನೆ 17 ಹೊಸ ಹಾಟ್‍ಸ್ಪಾಟ್‍ಗಳ ಘೋಷಣೆಯೊಂದಿಗೆ, ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆ 641 ಕ್ಕೆ ಏರಿದೆ. ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,12,629 ಜನರು ಕ್ವಾರಂಟೈನ್ ನಲ್ಲಿದ್ದಾರೆ. 1,86,140 ಮನೆ / ಸಾಂಸ್ಥಿಕ ಸಂಪರ್ಕತಡೆಯಲ್ಲಿ ಮತ್ತು 26,489 ಆಸ್ಪತ್ರೆಯ ಕಣ್ಗಾವಲಿನಲ್ಲಿದೆ.