ಕುಂಬಳೆ : ಇಲ್ಲಿನ ಶಾಂತಿಪಳ್ಳ ಸಮೀಪದ ಶೇಡಿಗುಮ್ಮೆ ನಿವಾಸಿ ನೀರ್ಚಾಲ್ ದಿ. ಕೃಷ್ಣ ಭಟ್ಟರ ಪತ್ನಿ ಶಾರದಮ್ಮ(84) ಬುಧವಾರ ಮೂಡಬಿದಿರೆಯ ತನ್ನ ಕಿರಿಯ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. ಇವರು ಕುಂಬಳೆ ಪರಿಸರದಲ್ಲಿ ಮನೆ ಮನೆಗೆ ತೆರಳಿ ಮಜ್ಜಿಗೆ ಮಾರಾಟ ಮಾಡಿ 'ಮಜ್ಜಿಗೆ ಅಜ್ಜಿ' ಎಂದು ಚಿರಪರಿಚಿತರಾಗಿದ್ದರು.
ಮೃತರು ಐದು ಮಂದಿ ಪುತ್ರರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅವರ ಇಬ್ಬರು ಪುತ್ರರು ಈ ಹಿಂದೆಯೇ ನಿಧನರಾಗಿದ್ದಾರೆ.