ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಬದಿಯಡ್ಕ ಅಂಚೆ ಕಚೇರಿ ಮುಂಭಾಗದಲ್ಲಿ ಶನಿವಾರ ಧರಣಿ ನಡೆಯಿತು.
ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಕಂಠನ್ ಅವರು, ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿಯಿಂದ ಕಾಪೆರ್Çರೇಟ್ ಗಳ ಪರವಾದ ಆಡಳಿತ ವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
ಬದಿಯಡ್ಕ ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ, ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಖಾದರ್ ಮಾನ್ಯ, ಕಾಸರಗೋಡು ಮಂಡಲ ಯೂತ್ ಕಾಂಗ್ರೆಸ್ ಅಧ್ಯಕ್ಷ ಮ್ಯಾಥ್ಯೂಸ್ ಮಾತನಾಡಿದರು.
ಶಾಫಿ ಬದಿಯಡ್ಕ, ರಾಮ ಮಾನ್ಯ, ಕುಮಾರ ನಾಯರ್, ವಿನ್ಸೆಂಟ್, ಶಾಫಿ ಪಯ್ಯಲಡ್ಕ, ಸಿರಿಲ್ ಡಿಸೋಜಾ, ಕರ್ಷಕ ಕಾಂಗ್ರೆಸ್ ಕಾರ್ಯಕರ್ತರು, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಧರಣಿಗೆ ನೇತೃತ್ವ ನೀಡಿದರು. ಬದಿಯಡ್ಕ ಮಂಡಲ ಕಾಂಗ್ರೆಸ್ಸ್ ಉಪಾಧ್ಯಕ್ಷ ಗಂಗಾಧರ ಗೋಳಿಯಡ್ಕ ಸ್ವಾಗತಿಸಿ, ಕಾರ್ಯದರ್ಶಿ ಶಿಜು ವಂದಿಸಿದರು.