ಉಪ್ಪಳ: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ (ಎ ಕೆ ಪಿ ಎ) ಕಾಸರಗೋಡು ಜಿಲ್ಲೆ ಕುಂಬಳೆ ವಲಯ, ಹಾಗೂ ಉಪ್ಪಳ ಘಟಕದಿಂದ ಧನಸಹಾಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಎ ಕೆ ಪಿ ಎ ಕಾಸರಗೋಡು ಜಿಲ್ಲಾ ಅಧ್ಯಕ್ಷ ಹರೀಶ್ ಪಾಲಕ್ಕುನ್ನು ಅವರು ಸ್ಟೀಫನ್ ಮೊಂತೇರೋ ಸೂಪರ್ ಸ್ಟುಡಿಯೋ ಕುಂಜತ್ತೂರು ಇವರಿಗೆ ಧನಸಹಾಯ ಹಸ್ತಾಂತರಿಸಿದರು. ಅಸೋಸಿಯೇಶನ್ ರಾಜ್ಯ ಸದಸ್ಯ ಭರತನ್, ಕುಂಬಳೆ ವಲಯ ಅಧ್ಯಕ್ಷ ವೇಣು, ಕಾರ್ಯದರ್ಶಿ ರಾಮಚಂದ್ರ, ಕೋಶಾಧಿಕಾರಿ ವಿಜಯನ್ , ಉಪ್ಪಳ ಘಟಕದ ಅಧ್ಯಕ್ಷ ಸುನಿಲ್, ಕಾರ್ಯದರ್ಶಿ ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.