ಕಾಸರಗೋಡು: ವಿದೇಶದಿಂದ ಆಗಮಿಸುವವರು ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ನಲ್ಲಿ ನಡೆಸಬೇಕು, 14 ದಿನಗಳ ಕ್ವಾರೆಂಟೈನ್ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಗುರುವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿಯ ವೀಡಿಯೋ ಕಾನ್ ಫೆರೆನ್ಸ್ ನಲ್ಲಿ ಅವರು ಈ ವಿಚಾರ ತಿಳಿಸಿದರು.
ಕಾಲನಿಗಳಲ್ಲಿ ವಿಶೇಷ ಗಮನ:
ಕಾಸರಗೋಡು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳಲ್ಲಿ ಕೋವಿಡ್ ಪಾಸಿಟಿವ್ ಕೇಸುಗಳು ಅಧಿಕ ಪ್ರಮಾಣದಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ಕಾಲಜಿ ವಹಿಸಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಎಸ್.ಸಿ.-ಎಸ್.ಟಿ. ಪ್ರಮೋಟರರ ಮೂಲಕ ಮಾಹಿತಿ ಸಂಗ್ರಹಿಸಿ ಅಗತ್ಯದ ಕ್ರಮ ಕೈಗೊಳ್ಳುವಂತೆ ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.
ಮೀನು ಮಾರುಕಟ್ಟೆ ಚಟುವಟಿಕೆ ಆರಂಭಕ್ಕೆ ಈಗ ಅನುಮತಿಯಿಲ್ಲ:
ಕಾಸರಗೋಡು ಮೀನು ಮಾರುಕಟ್ಟೆಗೆ ಪ್ರವೇಶ ನಡೆಸುವವರನ್ನು ನಿಯಂತ್ರಿಸುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಖಚಿತಪಡಿಸುವ ಕ್ರಮಗಳು ಕ್ರಿಯಾತ್ಮಕವಾಗಿಲ್ಲದೇ ಇರುವ ಕಾರಣ ಪ್ರಸ್ತುತ ಮುಂದಿನ ಆದೇಶದ ವರೆಗೂ ಮೀನುಮಾರುಕಟ್ಟೆ ಚಟುವಟಿಕೆ ಆರಂಭಕ್ಕೆ ಅನುಮತಿಯಿಲ್ಲ ಎಂದು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ತಿಳಿಸಿದೆ.
ಕೋವಿಡ್ ಸೋಂಕು ಕಡಿಮೆಯಿರುವ ಕಾರಣ ನೂತನ ಬಸ್ ನಿಲ್ದಾಣ ಪ್ರದೇಶದ ಸಾರ್ವಜನಿಕ ಜಾಗದಲ್ಲಿ ಮೀನು ಮಾರಾಟ ನಡೆಸಬಹುದು. ಇಲ್ಲಿಗ ಎಸಮೀಪದ ಖಾಸಗಿ ವ್ಯಕ್ತಿಯೊಬ್ಬರ ಮೈದಾನವಿದ್ದು, ಈ ಬಗ್ಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕಾಸರಗೋಡು ಡಿ.ವೈ.ಎಸ್.ಪಿ.ಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಡಿ.ವೈ.ಎಸ್.ಪಿ. ಬಾಲಕೃಷ್ಣನ್ ನಾಯರ್ ಪಿ., ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.