HEALTH TIPS

ಕೇರಳಕ್ಕೆ ಯುಎನ್ ಜೀವನಶೈಲಿ ರೋಗ ನಿಯಂತ್ರಣ ಪ್ರಶಸ್ತಿ; ಡಬ್ಲ್ಯುಎಚ್‍ಒ ನಿರ್ದೇಶಕರಿಂದ ಪ್ರಕಟ

       ತಿರುವನಂತಪುರ: ಕೇರಳಕ್ಕೆ ವಿಶ್ವಸಂಸ್ಥೆಯ ಜೀವನಶೈಲಿ ರೋಗ ನಿಯಂತ್ರಣ ಪ್ರಶಸ್ತಿ ಲಭ್ಯವಾಗಿದೆ. ಡಬ್ಲ್ಯುಎಚ್‍ಒ ಮಹಾನಿರ್ದೇಶಕ ಡಾ. ಟೆಟ್ರೋಡ್ಸ್ ಅದನೋವ್ ಗೇಬ್ರಿಯಾಸ್ ಈ ಪ್ರಶಸ್ತಿಯನ್ನು ಯುಎನ್ ಚಾನೆಲ್ ಮೂಲಕ ಅಧಿಕೃತವಾಗಿ ಘೋಷಿಸಿರುವರು.  ಆರೋಗ್ಯ ಕ್ಷೇತ್ರದಲ್ಲಿ ಕೇರಳ ನೀಡಿದ ದಣಿವರಿಯದ ಸೇವೆಗಳನ್ನು ಗುರುತಿಸಿ ಇದು ಎಂದು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

        ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಜೀವನಶೈಲಿ ರೋಗ ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಉತ್ತಮ ಸೇವೆಗಳನ್ನು ಒದಗಿಸಲಾಗಿದೆ. ಈ ಕೋವಿಡ್ ಅವಧಿಯಲ್ಲಿ, ಜೀವನಶೈಲಿ ರೋಗಿಗಳಿಗೆ ಹೆಚ್ಚಿನ ಗಮನ ನೀಡಿದ್ದರಿಂದ ಮರಣ ಪ್ರಮಾಣವು ಬಹಳ ಕಡಿಮೆಯಾಯಿತು. ಕೇರಳಕ್ಕೆ ಉತ್ತಮ ಮನ್ನಣೆ ಪಡೆಯಲು ಶ್ರಮಿಸಿದ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆಗಳು 'ಎಂದು ಸಚಿವೆ ಕೆ.ಕೆ.ಶೈಲಜಾ ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.

        'ಅತ್ಯುತ್ತಮ ಜೀವನಶೈಲಿ ರೋಗ ನಿಯಂತ್ರಣ ಚಟುವಟಿಕೆಗಳಿಗಾಗಿ ಕೇರಳವು ಯುಎನ್ ಐಎಟಿಎಫ್ ನ ವಾರ್ಷಿಕ ಪ್ರಶಸ್ತಿಯನ್ನು ಪಡೆದಿರುವುದು ಇದೇ ಮೊದಲು. 2020 ರಲ್ಲಿ ಕೇರಳದ ಆರೋಗ್ಯ ಇಲಾಖೆಯನ್ನು ವಿಶ್ವಸಂಸ್ಥೆಯು ಈ ಪ್ರಶಸ್ತಿಗೆ ಆಯ್ಕೆ ಮಾಡಿತು ಮತ್ತು ಇತರ 7 ದೇಶಗಳನ್ನು ಸರ್ಕಾರಿ ವಿಭಾಗದಲ್ಲಿ ಆಯ್ಕೆ ಮಾಡಿದೆ. ರಷ್ಯಾ, ಬ್ರಿಟನ್, ಮೆಕ್ಸಿಕೊ, ನೈಜೀರಿಯಾ, ಅರ್ಮೇನಿಯಾ ಮತ್ತು ಸೇಂಟ್ ಹೆಲೆನಾ ಅವರೊಂದಿಗೆ ಕೇರಳ ಪ್ರಶಸ್ತಿ ಸ್ವೀಕರಿಸಿದೆ.

   ಆರೋಗ್ಯ ಇಲಾಖೆ ಜಾರಿಗೆ ತಂದಿರುವ ಜೀವನಶೈಲಿ ರೋಗ ನಿಯಂತ್ರಣ ಕಾರ್ಯಕ್ರಮದ ಉತ್ಕøಷ್ಟತೆಯನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗಿದೆ.

     'ಈ ಪ್ರಶಸ್ತಿಯನ್ನು ಕೇರಳದ ಜೀವನಶೈಲಿ ರೋಗ ಯೋಜನೆ ಮತ್ತು ಅದರ ಮೂಲಕ ಹೆಚ್ಚಿನ ಸಂಖ್ಯೆಯ ಜನರು ಪಡೆದ ಚಿಕಿತ್ಸೆ ಮತ್ತು ಉಚಿತ ಸೇವೆಗಳನ್ನು ಗುರುತಿಸಿ ನೀಡಲಾಗುತ್ತದೆ. ಇದಲ್ಲದೆ, ಅತ್ಯಾಧುನಿಕ ಶ್ವಾಸಕೋಶ ರೋಗ ನಿಯಂತ್ರಣ ಕಾರ್ಯಕ್ರಮ, ರೆಟಿನಲ್ ಕುರುಡುತನ ನಿವಾರಣಾ ಕಾರ್ಯಕ್ರಮ, ಕ್ಯಾನ್ಸರ್ ಚಿಕಿತ್ಸಾ ಕಾರ್ಯಕ್ರಮ ಮತ್ತು ಪಾಶ್ರ್ವವಾಯು ನಿಯಂತ್ರಣ ಕಾರ್ಯಕ್ರಮವನ್ನು ಸಹ ಪ್ರಶಸ್ತಿಗಾಗಿ ಪರಿಗಣಿಸಲಾಯಿತು. ಕೇರಳದಲ್ಲಿ ಇತರ ಇಲಾಖೆಗಳು ಮತ್ತು ಏಜೆನ್ಸಿಗಳ ಸಹಯೋಗದೊಂದಿಗೆ ಈ ಯೋಜನೆಯ ಸಹಭಾಗಿತ್ವವನ್ನೂ ವಿಶೇಷವಾಗಿ ಉಲ್ಲೇಖಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries